ಬೆಂಗಳೂರು: ಬೌರಿಂಗ್ ಕ್ಲಬ್ನಲ್ಲಿ ಕೋಟಿ ಕೋಟಿ ಹಣ, ನೂರಾರು ಕೋಟಿ ಆಸ್ತಿ ಪತ್ರ ಸಿಕ್ಕ ಪ್ರಕರಣ ಸಂಬಂಧ ಕ್ಲಬ್ ಸದಸ್ಯರ ಸಭೆ ಇಂದು ಬೌರಿಂಗ್ ಕ್ಲಬ್ನಲ್ಲಿ ಆಯೋಜಿಸಲಾಗಿದ್ದು, ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಕ್ಲಬ್ನ ಅಧ್ಯಕ್ಷ ರೂಪ್ ಗೂಕಲಾಣಿ ಮತ್ತು ಆರೋಪಿ ಅವಿನಾಶ್ ಅಮರಲಾಲ್ ಕುಕ್ರೇಜಾ ಇಬ್ಬರೂ ಸಂಬಂಧಿಗಳು ಎಂಬ ಅಂಶ ಮೂಲಗಳಿಂದ ಪತ್ತೆಯಾಗಿದೆ.
ಈ ಬಗ್ಗೆ ನ್ಯೂಸ್ 18ಗೆ ಮಾಹಿತಿ ನೀಡಿದ ಮೂಲಗಳು, ಬೌರಿಂಗ್ ಕ್ಲಬ್ನ ಅಧ್ಯಕ್ಷ ರೂಪ್ ಗೂಕಲಾಣಿ ಮತ್ತು ಉದ್ಯಮಿ ಅವಿನಾಶ್ ಕುಕ್ರೇಜಾ ಸಂಬಂಧಿಗಳು, ಈ ವಿಚಾರ ಇಂದು ನಡೆದ ಸಭೆಯಲ್ಲಿ ಬಹಿರಂಹಗವಾಗಿದೆ ಎಂದಿವೆ.
ಸಭೆಯಲ್ಲಿ ಗೂಕಲಾಣಿ ಅವರೇ ಈ ವಿಚಾರವನ್ನು ಪ್ರಸ್ತಾಪಿಸಿದ್ಧಾಗಿ ಮೂಲಗಳು ತಿಳಿಸಿವೆ. ಗೂಕಲಾಣಿ ಅವರ ಹೆಂಡತಿಯ ಕಡೆಯಿಂದ ಕುಕ್ರೇಜಾ ನೆಂಟರಾಗಿದ್ದು ಅವರ ಮೂಲಕವೇ ಕುಕ್ರೇಜಾಗೆ ಸದಸ್ಯತ್ವ ಸಿಕ್ಕಿದ್ದು ಎನ್ನಲಾಗಿದೆ. ಅವಿನಾಶ್ ಕುಕ್ರೇಜಾರನ್ನು ಕ್ಲಬ್ ಸದಸ್ಯ ಸ್ಥಾನದಿಂದ ಉಚ್ಛಾಟಿಸಲು ಸದಸ್ಯರು ಪಟ್ಟು ಹಿಡಿದಿದ್ದಾರೆ. ಆದರೆ ಇದಕ್ಕೆ ಒಪ್ಪದ ಅಧ್ಯಕ್ಷ ರೂಪ್ ಗೂಕಲಾಣಿ, ಷೋ ಕಾಸ್ ನೊಟೀಸ್ ನೀಡಿ, ಉತ್ತರ ಬಂದ ನಂತರ ಸದಸ್ಯತ್ವ ರದ್ದುಗೊಳಿಸಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಸಭೆಯಲ್ಲಿ ಎರಡು ಪಂಗಡಗಳಾಗಿದ್ದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅಂತಿಮವಾಗಿ ಷೋ ಕಾಸ್ ನೊಟೀಸ್ ನೀಡಿದ ನಂತರ ಉತ್ತರ ಪಡೆದು ಉಚ್ಛಾಟನೆಗೆ ನಿರ್ಧಾರ ಮಾಡುವಂತೆ ರೂಪ್ ಗೂಕಲಾಣಿ ಸೂಚನೆ ನೀಡಿದ್ದಾರೆ.
ಈಗ ಕ್ಲಬ್ನಲ್ಲಿ ಹಣ, ಚಿನ್ನಾಭರಣ ಮತ್ತು ಆಸ್ತಿಪತ್ರಗಳನ್ನು ಇಡುವಲ್ಲಿ ಅಧ್ಯಕ್ಷ ರೂಪ್ ಗೂಕಲಾಣಿ ಪ್ರಯತ್ನಿಸಿದ್ದರೇ ಎಂಬ ಪ್ರಶ್ನೆ ಉದ್ಭವವಾಗಿದೆ. ಜತೆಗೆ ಕ್ಲಬ್ ಸದಸ್ಯರಿಗೂ ಸಹ ಮುಜುಗರ ಉಂಟಾಗಿದೆ. ಕ್ಲಬ್ನ ಬ್ಯಾಡ್ಮಿಂಟನ್ ಲಾಕರ್ನಲ್ಲಿ 800 ಕೋಟಿ ರೂಗಳಿಗೂ ಮಿಗಿಲಾದ ಆಸ್ತಿ ಪತ್ರ, 3.86 ಕೋಟಿ ರೂ ನಗದು, ಕೋಟ್ಯಂತರ ರೂಗಳ ಚಿನ್ನಾಭರಣ ಮತ್ತು ಬ್ಲಾಂಕ್ ಚೆಕ್ಗಳು ಸಿಕ್ಕಿತ್ತು. ಇದಾದ ನಂತರ ಬೌರಿಂಗ್ ಕ್ಲಬ್ನ ಎಲ್ಲಾ ಸದಸ್ಯರೂ ಮುಜುಗರಕ್ಕೆ ಒಳಗಾಗಿದ್ದರು. ಇಷ್ಟಾದರೂ ಅವಿನಾಶ್ ಕುಕ್ರೇಜಾ ಸದಸ್ಯತ್ವ ರದ್ದು ಮಾಡುತ್ತಿಲ್ಲ ಎಂಬ ಸಿಟ್ಟು ಹಲವು ಸದಸ್ಯರಲ್ಲಿ ಹುಟ್ಟಿದೆ ಎನ್ನಲಾಗಿದೆ.
Comments are closed.