ಕರಾವಳಿ

ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ‌ ಒತ್ತಾಯಿಸಿ ಸಚಿವೆ ಜಯಮಾಲಾರಿಗೆ ಸಾಹಿತ್ಯ ಪರಿಷತ್ತ್ ಮನವಿ

Pinterest LinkedIn Tumblr

ಮಂಗಳೂರು : ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪೋಷಿಸುವ ನೆಲೆಯಲ್ಲಿ ದಕ್ಷಿಣ ಕನ್ನ ಡಜಿಲ್ಲೆಗೆ ‌ಅತೀ‌ ಅಗತ್ಯವೆನಿಸುವ ರಂಗಮಂದಿರ ನಿರ್ಮಾಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ‌ ಎಸ್. ಪ್ರದೀಪಕುಮಾರ ಕಲ್ಕೂರ‌ ಒತ್ತಾಯಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವೆಡಾ. ಜಯಮಾಲಾ‌ ಅವರನ್ನು ಸಾಹಿತ್ಯ ಪರಿಷತ್ತಿನ ನಿಯೋಗದೊಂದಿಗೆ ಭೇಟಿಮಾಡಿ ರಂಗ ಮಂದಿರದ‌ ಅಗತ್ಯತೆಯಬಗ್ಗೆ ಕಲ್ಕೂರ‌ ಅವರು ಪ್ರಸ್ತಾಪಿಸಿದರಲ್ಲದೆ ಸಚಿವರಿಗೆ ಸಾಹಿತ್ಯ ಪರಿಷತ್ತಿನಿಂದ ಮನವಿಯೊಂದನ್ನು ಸಲ್ಲಿಸಿದರು.

ಈ ಸಂದರ್ಭಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ‌ಇಲಾಖೆಯ ಸಹಾಯಕ ನಿರ್ದೇಶಕರಾಜೇಶ್ ಜಿ., ಅಲ್ಲದೆಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕುಘಟಕದ‌ ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಜಿಲ್ಲಾ ಕ.ಸಾ.ಪ ಗೌರವಕೋಶಾಧಿಕಾರಿ ಪೂರ್ಣಿಮಾರಾವ್ ಪೇಜಾವರ, ಪ್ರಭಾಕರರಾವ್ ಪೇಜಾವರ, ಜಿ.ಕೆ. ಭಟ್ ಸೇರಾಜೆ, ದಿವಾಣಗೋವಿಂದ ಭಟ್ಟ ಮೊದಲಾದವರು ಉಪಸ್ಥಿತರಿದ್ದರು.

Comments are closed.