ಕರಾವಳಿ

ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಸೇವಿಸಿದರೆ ಸಿಗುವುದು ಹತ್ತು ಆರೋಗ್ಯಕರ ಲಾಭ

Pinterest LinkedIn Tumblr

ಭಾರತೀಯರ ಆಚರಣೆ, ಉಡುಗೆ, ತೊಡುಗೆ, ಊಟದಲ್ಲಿ ಒಂದೊಂದು ನಂಬಿಕೆ ಇದೆ. ಊಟಕ್ಕೆ ಬಾಳೆ ಏಲೆ.. ಮೊದಲು ಈ ಆಹಾರ ತಿಂದ್ರೆ ಉತ್ತಮ. ವಾತಾವರಣಕ್ಕೆ ಅನುಸಾರವಾಗಿ ಆಹಾರ ಪದ್ಧತಿ ಇವೆ. ಹಾಗೇ ಊಟವಾದ ಬಳಿಕ ಮಜ್ಜಿಗೆಯನ್ನು ಕುಡಿಯದೇ ಇದ್ದರೆ ಊಟ ಪರಿಪೂರ್ಣ ಎನಿಸುವುದೇ ಇಲ್ಲ.

ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಬಹು ಮುಖ್ಯ. ಮಜ್ಜಿಗೆಯು ಕೇವಲ ಒಂದು ಆಹಾರ ಪದಾರ್ಥವಲ್ಲ. ಹಲವಾರು ಔಷಧೀಯ ಗುಣಗಳಿವೆ.

ದೇಹದ ಆರೋಗ್ಯಕ್ಕೆ ಬೇಕಾದ ಖನಿಜಾಂಶವನ್ನು ಮಜ್ಜಿಗೆ ಹೊಂದಿದೆ. ವಿಟಾಮಿನ್​ ಬಿ 12 ಗ್ಲುಕೋಸನ್ನು ಸುಲಭವಾಗಿ ಜೀರ್ಣಿಸಿ ಶಕ್ತಿಯಾಗಿ ಪರಿವರ್ತಿಸುತ್ತದೆ. ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹಾಗೂ ಪಾಸ್ಪರಸ್ ಅಂಶವು ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಪುಷ್ಟಿಯನ್ನು ನೀಡುತ್ತದೆ.ಮಜ್ಜಿಗೆಗೆ ಶುಂಠಿ ರಸ ಮತ್ತು ಉಪ್ಪು ಸೇರಿಸಿ ಸೇವಿಸುವುದರಿಂದ ವಾಂತಿ ಉಪಶಮನವಾಗುತ್ತದೆ. ಸಕ್ಕರೆ ಖಾಯಿಲೆ ಇರುವವರಂತೂ ಪ್ರತಿದಿನ ಮಜ್ಜಿಗೆ ಕುಡಿದರೆ ಉತ್ತಮ. ಮಜ್ಜಿಗೆಗೆ ಎಷ್ಟೊಂದು ಶಕ್ತಿಯಿದೆ ನೋಡಿ..!

ಹೊಟ್ಟೆ ಉರಿ ನಿವಾರಣೆಗೆ ಮಜ್ಜಿಗೆ ಉಪಯೋಗ. ಇದನ್ನು ಸೇವನೆ ಮಾಡಿದರೆ, ನಿವಾರಣೆ ಆಗುತ್ತದೆ.ಇದರಲ್ಲಿ ಇಲೆಕ್ಟ್ರೋಲೈಟ್​ ಪ್ರಮಾಣ ಅಧಿಕವಾಗಿರುತ್ತದೆ.ದೇಹದ ಉಷ್ಣತೆಯ ವಿರುದ್ಧ ಹೋರಾಡುವ ಶಕ್ತಿ ಇದಕ್ಕಿದೆ. ಡೀಹೈಡ್ರೇಶನ್​ ಸಮಸ್ಯೆ ಇದ್ದಲ್ಲಿ ಪ್ರತಿ ದಿನ ಒಂದು ಲೋಟ ಮಜ್ಜಿಗೆ ಕುಡಿದ್ರೆ ನಿವಾರಣೆ.

ಮಜ್ಜಿಗೆಗೆ ಅರ್ಧ ಚಮಚ ಶುಂಠಿ ಬೆರಿಸಿ ಕಲಸಿ ಕುಡಿದ್ರೆ, ಡೈರಿಯಾದಿಂದ ಮುಕ್ತಿ ಇದನ್ನು ಸೇವಿಸುವುದರಿಂದ ಕ್ಯಾನ್ಸರ್​​, ಕೊಲೆಸ್ಟ್ರಾಲ್​​, ರಕ್ತದೊತ್ತಡ ಕಡಿಮೆ ಮಾಡಲು ಇದು ಉಪಯೋಗ.
ಇನ್ನು ನಿಮಗೆ ಪೈಲ್ಸ್​ ಸಂಬಂಧಿತ ಸಮಸ್ಯೆಗಳು ಇದ್ದಲ್ಲಿ ಇದರ ಸೇವನೆಯಿಂದ ಮುಕ್ತಿ ಸಾಧ್ಯ.

ಇದರಲ್ಲಿ ಪ್ರೋಟಿನ್​ ಬ್ಲಡ್​ ಪ್ರೇಶರ್​ ಕಡಿಮೆ ಮಾಡುತ್ತದೆ. ಅಲ್ಲದೆ ಲೀವರ್​ ಆರೋಗ್ಯವಾಗಿರಲು ಇದು ಸಹಾಯಕ. ಇನ್ನು ತೂಕದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವರಿಗೆ ಇದು ತುಂಬಾನೇ ಮುಖ್ಯ.

Comments are closed.