ಕರಾವಳಿ

ಬಾಯಿಯ ಜೊಲ್ಲಿನ ಪ್ರಮಾಣ ಕಡಿಮೆಯಾದರೆ ಎದುರಾಗುವ ಸಮಸ್ಯೆಗಳು ಬಲ್ಲಿರಾ..?

Pinterest LinkedIn Tumblr

ಒಣ ಬಾಯಿ ಎಂದರೆ ಬಾಯಿಯಲ್ಲಿನ ಜೊಲ್ಲಿನ ಪ್ರಮಾಣ ಕಡಿಮೆಯಾಗುವುದು ಇಲ್ಲವೇ ಜೊಲ್ಲು ಬಾರದೇ ಇರಬಹುದು. ಇದರಿಂದ ಬಾಯಿ ಒಣಗಿ ಯಾವುದೇ ಬಾಯಿ ಸಂಬಂಧಿ ಕೆಲಸ ಮಾಡಲಾಗುವುದಿಲ್ಲ.

ಎದುರಾಗುವ ಸಮಸ್ಯೆಗಳು:
ಆಹಾರ ಜಗಿಯಲು, ನುಂಗಲು, ಮುಂದೆ ಹಿಂದೆ ಬಾಯಿ ಆಡಿಸಲು ಆಗುವುದಿಲ್ಲ.
ಆಹಾರ ಸರಿಯಾಗಿ ಜೀರ್ಣವಾಗದೇ ಮಲಬದ್ಧತೆ ಕಾಡುತ್ತದೆ.
ದೈಹಿಕ ತಾಪಮಾನದಲ್ಲಿ ಏರಿಕೆ, ಬಾಯಿಹುಣ್ಣು ಸಮಸ್ಯೆ ಉಂಟಾಗುತ್ತದೆ.
ಪದೇ ಪದೇ ಬಾಯಾರಿಕೆ, ನಾಲಿಗೆ ಕೆಂಪಾಗಿ ಬಾವು ಬರುವುದು, ಮಾತನಾಡಲು ಕಷ್ಟವಾಗುತ್ತದೆ.
ಬಾಯಿ ಸರಿಯಾಗಿ ಸ್ವಚ್ಛವಾಗದೇ ಆಹಾರ ಕಣ ಅಲ್ಲಲ್ಲಿ ಉಳಿದು ದುರ್ವಾಸನೆ ಬೀರುತ್ತದೆ. ದಂತಕ್ಷಯ, ಹುಳುಕು, ವಸಡು ರೋಗ ಕಾಣಿಸಿಕೊಳ್ಳುತ್ತದೆ.
ಯಾವುದೇ ಹಲ್ಲು ಸೆಟ್ ಕೂರಿಸಲು ಬಾರದೆ, ಹಲ್ಲುಗಳು ಅಲುಗಾಡುತ್ತವೆ.

ಕಾರಣಗಳು:
ಮುಖ್ಯವಾಗಿ ಅರ್ಬುದ ರೋಗಕ್ಕೆ ಪಡೆವ ವಿಕಿರಣ ಚಿಕಿತ್ಸೆ.
ಅತಿ ಮಾತ್ರೆ ಸೇವನೆ, ಮಾತ್ರೆಗಳ ಅಡ್ಡ ಪರಿಣಾಮಗಳಿಂದ ಕೀಮೋಥೆರಪಿ ಚಿಕಿತ್ಸೆ.
ಭಯ, ಉದ್ವೇಗ, ಗಾಬರಿ, ಮಾನಸಿಕ ಒತ್ತಡ.
ಅತೀ ಧೂಮಪಾನ, ಮದ್ಯಪಾನ, ತಂಬಾಕು ಸೇವನೆ
ಮಧುಮೇಹ ರೋಗ, ರಕ್ತಹೀನತೆ, ಅತೀ ರಕ್ತದೊತ್ತಡ.
ಜೊಲ್ಲು ಗ್ರಂಥಿಗಳಿಗೆ ಹಾನಿ ಹಾಗೂ ಸೊಂಕು.
ದೇಹದ ದ್ರವದ ಅಂಶ ವಾಂತಿ ಭೇದಿ, ರಕ್ತಸ್ರಾವಗಳಿಂದ ಕೂಡ ಸಮಸ್ಯೆ ಉದ್ಭವಿಸುತ್ತದೆ.

ಇದಕ್ಕೂ ಪರಿಹಾರವಿದೆ..
1. ದೇಹದಲ್ಲಿ ನೀರಿನಂಶ ಸದಾ ಕಾಲ ಇರುವಂತೆ ನೋಡಿಕೊಳ್ಳಬೇಕು.
2. ದಿನಕ್ಕೆ2-3 ಲೀಟರ್ ನೀರು, ಮಜ್ಜಿಗೆ, ಹಣ್ಣಿನ ರಸ ಸೇವಿಸಬೇಕು.
3. ಧೂಮಪಾನ, ಮದ್ಯಪಾನದಿಂದ ದೂರಾಗಿ.
4. ಕಾರ್ಬನ್, ಸೋಡಾಯುಕ್ತ ಪಾನೀಯ ಸೇವಿಸಬಾರದು.
5. ಚಹಾ, ಕಾಫಿ ಸೇವನೆ ಮಿತವಾಗಿರಲಿ.
6. ಬಾಯಿಯ ತೇವಾಂಶ ಹೆಚ್ಚಿಸಲು ಸೂಕ್ತ ಔಷಧಿ ಸೇವನೆ ಹಾಗೂ ದಂತ ವೈದ್ಯರನ್ನು ಸಂಪರ್ಕಿಸಿ.
7. ಬಾಯಿಯಿಂದ ಉಸಿರಾಡುವ ಚಟವಿದ್ದರೆ ನಿಲ್ಲಿಸಿ ಮೂಗಿನಿಂದ ಉಸಿರಾಡುವ ಕ್ರಮ ರೂಢಿಸಿಕೊಳ್ಳಿ.
9. ಲಿಂಬೆ, ಕಿತ್ತಳೆ, ಮೂಸಂಬಿ, ಅನಾನಸ್ ತರಹದ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ.

ಒಣ ಬಾಯಿ ಸಮಸ್ಯೆ ತಿಳಿದುಕೊಂಡು ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಿ

Comments are closed.