ಬೇರುತ್: ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಆ್ಯಂಡ್ ಇರಾಕ್ (ಇಸಿಸ್) ಉಗ್ರ ಸಂಘಟನೆ ಅಟ್ಟಹಾಸ ಮೆರೆದಿದ್ದು, ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಸಿರಿಯಾ ಸರ್ಕಾರದ ಹಿಡಿತದಲ್ಲಿರುವ ಸ್ವೇಡಾ ನಗರ ಸೇರಿ ಒಟ್ಟು ಮೂರು ಗ್ರಾಮಗಳ ಮೇಲೆ ದಾಳಿ ಸರಣಿ ಆತ್ಮಾಹುತಿ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಹಲವು ನಾಗರೀಕರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ನೈಋತ್ಯಾ ಸಿರಿಯಾದ ಹಲವೆಡೆ ಆತ್ಮಾಹುತಿ ದಾಳಿ ನಡೆಸಲಾಗಿದೆ. ದಾಳಿಯ ಹೊಣೆಯನ್ನು ಇಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಸಂಘಟನೆಯ ಉಗ್ರರು ಸ್ವೆಡಾ ನಗರದಲ್ಲಿರುವ ಸಿರಿಯಾ ಸರ್ಕಾರದ ಪ್ರದೇಶಗಳು ಹಾಗೂ ಭದ್ರತಾ ಪಡೆಗಳ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ.
ಸ್ವೆಡಾ ನಗರದ ಮೇಲೆ ನಾಲ್ವರು ಆತ್ಮಾಹುತಿ ದಾಳಿಕೋರರು ದಾಳಿ ನಡೆಸಿದ್ದಾರೆ, ಕೆಲ ಸಣ್ಣ ಗ್ರಾಮಗಳ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದು, ಸ್ಥಳೀಯ ನಾಗರೀಕರ ಮನೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
Comments are closed.