ಇಸ್ಲಾಮಾಬಾದ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷ, ಇತಿಹಾಸ ನಮ್ಮೊಂದಿಗಿದ್ದು, ಇಮ್ರಾನ್ ಖಾನ್ ಅವರೇ ಮುಂದಿನ ಪಾಕಿಸ್ತಾನ ಪ್ರಧಾನಿ ಎಂದು ಟ್ವೀಟ್ ಮಾಡಿದೆ.
ನಿನ್ನೆ ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ಒಟ್ಟು 272 ಕ್ಷೇತ್ರಗಳ ಪೈಕಿ 122 ಕ್ಷೇತ್ರಗಳಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಮುನ್ನಡೆ ಸಾಧಿಸಿದೆ. ಈಗಾಗಲೇ ಪಿಟಿಐ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಇನ್ನು ಪಿಐಟಿ ಪಕ್ಷ ವಕ್ತಾರರಾದ ಶಾಹಿದಾ ಅಲಿ ಅವರು ಸಂಭ್ರಮಾಚರಣೆ ವೇಳೆಯಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾನು ಈಗ ಹೊಸ ಪಾಕಿಸ್ತಾನವನ್ನು ಕಂಡುಕೊಂಡಿದ್ದೇವೆ. ಇಮ್ರಾನ್ ಖಾನ್ ಅವರ ನೇತೃತ್ವದಲ್ಲಿ ಖಂಡಿತಾ ನಾವು ಹೊಸದೊಂದು ಮಾರ್ಗದಲ್ಲಿ ಚಲಿಸಲಿದ್ದೇವೆ ಎಂದು ಹೇಳಿದ್ದಾರೆ.
Comments are closed.