ನವದೆಹಲಿ: ಪಾಕಿಸ್ತಾನ ಭಾರತದ ಮೇಲೆ ಯುದ್ಧ ನಡೆಸಬಹುದು. ಪಾಕಿಸ್ತಾನವನ್ನು 4 ಹೋಳು ಮಾಡಲು ಭಾರತ ಸಿದ್ಧವಾಗಿರಬೇಕು ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಗುರುವಾರ ಹೇಳಿದ್ದಾರೆ.
ಪಾಕಿಸ್ತಾನ ಚುನಾವಣೆಯಲ್ಲಿ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಗೆಲುವು ಸನ್ನಿಹಿತವಾಗಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನ ತನ್ನ ತಪ್ಪು ಲೆಕ್ಕಾಚಾರಗಳಿಂದ ಭಾರತದ ವಿರುದ್ಧ ಯುದ್ಧ ಮಾಡಬಹುದು. ಆದರೆ, ಪಾಕಿಸ್ತಾನವನ್ನು ನಿರ್ಣಾಮ ಮಾಡಲು ನಾವು ಸಿದ್ಧವಿರಬೇಕು, ಪಾಕಿಸ್ತಾನವನ್ನು ನಾಲ್ಕು ಭಾಗ ಮಾಡಲು ಇದು ಅತ್ಯುತ್ತಮ ಅವಕಾಶವಾಗಿದೆ ಎಂದು ಹೇಳಿದ್ದಾರೆ.
ಇಮ್ರಾನ್ ಕೈಗೊಂಬೆ ಇದ್ದಂತೆ. ಕೈಗೊಂಬೆಯಂತೆ ನವಾಜ್ ಷರೀಫ್ ನಟಿಸುವುದನ್ನು ನೋಡುವುದಕ್ಕಿಂತಲೂ ಕೈಗೊಂಬೆಯಾಗಿರುವವರನ್ನೇ ನೋಡುವುದೇ ಉತ್ತಮ. ಷರೀಫ್, ಇಮ್ರಾನ್ ಖಾನ್ ಎಲ್ಲರೂ ಕೈಗೊಂಬೆಗಳೇ. ಪಾಕಿಸ್ತಾನದಲ್ಲಿರುವ ನಾಗರೀಕ ರಾಜಕಾರಣಿಗಳೆಲ್ಲರೂ ಐಎಸ್ಐ, ಸೇನೆ ಹಾಗೂ ತಾಲಿಬಾನ್’ಗಳ ಕೈಗೊಂಬೆಗಳೇ ಎಂದು ತಿಳಿಸಿದ್ದಾರೆ.
Comments are closed.