ಮಂಗಳೂರು : ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಮಂಗಳೂರು ದಕ್ಷಿಣ ಶಾಸಕ ರಾದ ಡಿ ವೇದವ್ಯಾಸ್ ಕಾಮತ್ ರವರಿಂದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಇಂದು ಬೆಳಿಗ್ಗೆ ಕದ್ರಿ ಯಲ್ಲಿರುವ ಹುತಾತ್ಮರ ಸ್ಮಾರಕ್ಕೆ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಶಾಸಕರು,1999ರಲ್ಲಿ ನಡೆದ ಕಾರ್ಗಿಲ್ ಕದನ ಭಾರತೀಯ ಸೈನಿಕರ ಪೌರುಷವನ್ನು ಜಗತ್ತಿನಾದ್ಯಂತ ಪಸರಿಸಿದೆ. ಕುತಂತ್ರಿ ಪಾಕಿಸ್ಥಾನಕ್ಕೆ ಮುಟ್ಟಿ ನೋಡಿಕೊಳ್ಳುವ ಹೊಡೆತ ನೀಡಿ ಕಾರ್ಗಿಲ್ ಭೂಮಿಯಿಂದ ಒದ್ದೋಡಿಸಿದ ಸೇನೆ ಅಲ್ಲಿ ವಿಜಯಧ್ವಜ ನೆಟ್ಟು ಸಂಭ್ರಮಿಸಿದ ದಿನ ಇಂದು.
ಈ ಯುದ್ಧದಲ್ಲಿ ಸೌರಭ್ ಕಾಲಿಯಾ,ವಿಕ್ರಮ್ ಭಾತ್ರ,ಜಸ್ವಿಂದರ್ ಸಿಂಗ್,ಮನೋಜ್ ಕುಮಾರ್ ಪಾಂಡೆಯರಂತಹ 572 ವೀರಕಲಿಗಳನ್ನು ಕಳೆದುಕೊಂಡಿದ್ದೇವೆ.ಒಂದು ಕಡೆ ಸಂಭ್ರಮದ ವಿಚಾರವಾದರೆ ಮತ್ತೊಂದೆಡೆ ವೀರಯೋಧರನ್ನು ಕಳೆದುಕೊಂಡ ನೋವೂ ಇದೆ.
ಭಾರತ ಮಾತೆಯ ಮೇಲೆ ಕೈಯಿಟ್ಟ ಪಾಕಿಸ್ಥಾನದ ನಡು ಮುರಿದು ಅಟ್ಟಾಡಿಸಿ ಬಡಿದ ವೀರ ಯೋಧರನ್ನು ಇಂದು ಪ್ರತಿಯೊಬ್ಬರೂ ನೆನೆಯಲೇಬೇಕು.ಇಂದು ಗಡಿಯಲ್ಲಿ ಸುಡು ಬಿಸಿಲು,ರಕ್ತ ಹೆಪ್ಪುಗಟ್ಟುವ ಚಳಿಯ ನಡುವೆ ಪಾಕಿಸ್ಥಾನಿ ಕುತಂತ್ರಿಗಳು ಹೊಡೆವ ಗುಂಡಿಗೆ ದೇಶದ ರಕ್ಷಣೆಗೆ ಎದೆಕೊಟ್ಟು ನಿಂತಿರುವ ವೀರ ಯೋಧರನ್ನು ಗೌರವಿಸುವ ಮಹತ್ಕಾರ್ಯ ಆಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ಕಂಡೆಟ್ಟು,ವಾರ್ಡ್ ಅಧ್ಯಕ್ಷ ರಾಮಕೃಷ್ಣ ರಾವ್,ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ್ ಜೆ ಪೂಜಾರಿ,ಬಿ ಜೆ ಪಿ ಮಲಯಾಳಿ ಪ್ರಕೋಷ್ಠದ ಸಂಚಾಲಕ ಪ್ರದೀಪ್ ಕುಮಾರ್.ಮಹಾ ಶಕ್ತಿಕೇಂದ್ರ ಸಹ ಸಂಚಾಲಕ್ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.
ಚಿತ್ರ : ಮಂಜು ನೀರೇಶ್ವಾಲ್ಯ
Comments are closed.