ರಾಷ್ಟ್ರೀಯ

ಕಳೆದ 10 ವರ್ಷದಿಂದ ಗೃಹ ಬಂಧನದಲ್ಲಿದ್ದ ಮೂವರು ಮಕ್ಕಳ ರಕ್ಷಣೆ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ…!

Pinterest LinkedIn Tumblr

ವರಪ್ಪುಳ: ಕಳೆದ 10 ವರ್ಷದಿಂದ ಗೃಹ ಬಂಧನದಲ್ಲಿದ್ದ ಮೂವರು ಮಕ್ಕಳನ್ನು ಮಕ್ಕಳ ರಕ್ಷಣಾ ಸಮಿತಿ ರಕ್ಷಿಸಿದೆ.

ಸ್ಥಳೀಯರ ದೂರಿನ ಮೇರೆಗೆ ಕಾರ್ಯ್ರವೃತ್ತವಾದ ಜಿಲ್ಲಾಡಳಿತ, ಸಮಿತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಯಲ್ಲಿ ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ನೆರೆ ಮನೆಯವರು ಈ ಕುರಿತು ದೂರು ನೀಡಿದ ಬಳಿಕ ಜಿಲ್ಲಾಡಳಿತ, ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಸಮಿತಿ ಮನೆಗೆ ಭೇಟಿ ನೀಡಿತ್ತು. ಮಕ್ಕಳ ರಕ್ಷಣೆ ವೇಳೆ ತಾಯಿ ರೇಖ ಜತೆಗಿದ್ದಳು.

ವರಪ್ಪುಳದ ಪಾಚೊತ್ತಿಲ್ ಅಬ್ದುಲ್ ಲತೀಫ್‌- ರೇಖಾ ದಂಪತಿಗೆ ಮೂವರು ಮಕ್ಕಳಿದ್ದು, ಕಳೆದ 10 ವರ್ಷದಿಂದ ಮನೆಯೊಳಗೆ ಕೂಡಿ ಹಾಕಿದ್ದರು. ಮೂವರು ಗಂಡು ಮಕ್ಕಳಾಗಿದ್ದು, ಹೊರ ಪ್ರಪಂಚ ಕೆಟ್ಟದಾಗಿದೆ ಎಂದು ಮಕ್ಕಳನ್ನು ಮನೆಯೊಳಗೇ ಇರಿಸಲಾಗಿತ್ತು ಎಂದು ತಿಳಿದು ಬಂದಿದೆ.

ಮಕ್ಕಳಿಗೆ ಲತೀಫ್ ದಂಪತಿ ಮನೆಪಾಠ ಮಾಡುತ್ತಿದ್ದರು. ಅಲ್ಲದೆ ನೆರೆಮನೆಯವರ ಜತೆಗೂ ಯಾವುದೇ ಸಂಪರ್ಕ ಹೊಂದಿರಲಿಲ್ಲ. ದಂಪತಿ ಮಾತ್ರ ಹೊರಗೆ ಹೋಗುತ್ತಿದ್ದು, ಮನೆಯನ್ನು ಲಾಕ್ ಮಾಡಿ ತೆರಳುತ್ತಿದ್ದರು.

Comments are closed.