ಕರ್ನಾಟಕ

ಎಲ್ಲ ಶಾಲೆಗಳಲ್ಲೂ ಆ್ಯಂಟಿ ಡ್ರಗ್​ ದಳ ರಚನೆ: ಡಿಜಿಪಿಗೆ ಆದೇಶ ನೀಡಿದ ಉಪಮುಖ್ಯಮಂತ್ರಿ ಪರಮೇಶ್ವರ್​

Pinterest LinkedIn Tumblr


ಬೆಂಗಳೂರು: ಒಂದು ವಾರದೊಳಗೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಆ್ಯಂಟಿ ಡ್ರಗ್ ದಳ ರಚಿಸಲು ಸರ್ಕಾರದಿಂದ ಆದೇಶ ಹೊರಡಿಸುವಂತೆ ಡಿಜಿಪಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ.

ಶಿಕ್ಷಣ ಇಲಾಖೆ ಮೂಲಕ ಅಧಿಕೃತವಾಗಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಸುತ್ತೋಲೆ ಹೊರಡಿಸುವಂತೆ ಸೂಚನೆ ನೀಡಲಾಗಿದೆ. ಡ್ರಗ್ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಆಗಸ್ಟ್​ನಲ್ಲಿ ಅಭಿಯಾನ ಮಾಡಲು‌ ಪೊಲೀಸ್​ ಇಲಾಖೆ ನಿರ್ಧರಿಸಿದೆ.

ಪೊಲೀಸ್ ಸಿಬ್ಬಂದಿ ನೇಮಕ ಹಾಗೂ ಪೊಲೀಸರಿಗೆ ಮನೆ‌ ನಿರ್ಮಾಣಕ್ಕೆ ಹಣಕಾಸು‌‌ ಮಂಜೂರಾತಿ ನೀಡುವಂತೆ ಹಣಕಾಸು ಇಲಾಖೆಗೆ ಮನವಿ ಮಾಡಲಾಗಿದೆ. 11 ಸಾವಿರ ಮನೆಗಳ ನಿರ್ಮಾಣಕ್ಕೆ ಹಣದ ಅವಶ್ಯಕತೆಯಿದೆ. ಹಾಗಾಗಿ, ಹಣಕಾಸು ಮಂಜೂರಾತಿಗೆ ಡಾ. ಜಿ. ಪರಮೇಶ್ವರ್​ ಇಂದು ನಡೆದ ಪೊಲೀಸ್​ ಅಧಿಕಾರಿಗಳು ಮತ್ತು ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿರುವ ಹಣಕಾಸು ಇಲಾಖೆ ಹಣ ಮಂಜೂರು ಮಾಡಲಿದೆ.

Comments are closed.