ಮನೋರಂಜನೆ

‘ಗೀತಾ ಗೋವಿಂದಂ’ ಚಿತ್ರದ ಹಾಡನ್ನು ಬೇಸರದಿಂದಲೇ ಶೇರ್‌ ಮಾಡಿದ ರಶ್ಮಿಕಾ ಮಂದಣ್ಣ!

Pinterest LinkedIn Tumblr


ಕಿರಿಕ್‌ ಪಾರ್ಟಿ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ, ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರೀಗ ಗೀತಾ ಗೋವಿಂದಂ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ ಸಿನಿಮಾದ ಒಂದು ಹಾಡು ಬಿಡುಗಡೆಯಾಗಿದ್ದು, ‘ಇಂಕೇಮ್‌ ಇಂಕೇಮ್‌ ಕಾವಾಲೇ’ ಹಾಡು ಟ್ರೆಂಡಿಂಗ್‌ ಆಗಿದೆ. ಈ ಮಧ್ಯೆ ಸಿನಿಮಾದ ಮತ್ತೊಂದು ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಈ ಹಾಡನ್ನು ರಶ್ಮಿಕಾ ಬೇಸರದಿಂದಲೇ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅದ್ಯಾಕೆ ಅಂತೀರಾ… ಗೀತಾ ಗೋವಿದಂ ಚಿತ್ರದ ನಟ ವಿಜಯ ದೇವರಕೊಂಡ ಹಾಡಿರುವ ‘ವಾಟ್‌ ಈಸ್‌ ದ ಎಫ್‌’ ಹಾಡನ್ನು ಶೇರ್‌ ಮಾಡಿರುವ ರಕ್ಷಿತಾ ಪಡ್ಡೆ ಹುಡುಗರ ಕಾಲೆಳಿಯುತ್ತಿದ್ದಾರೆ.

ವಾಟ್ ಈಸ್‌ ದ ಸಾಂಗ್‌ ಎಫ್‌ ಹಾಡು ರಿಲೀಸ್‌ ಆಗಿದೆ. ಚಿತ್ರದ ನಾಯಕಿಯಾಗಿ ನಾನು ಈ ಹಾಡನ್ನು ಪ್ರಮೋಟ್ ಮಾಡುತ್ತಿದ್ದೇನೆ. ಏನು ಮಾಡೋದು, ಎಲ್ಲ ಮುಗ್ಧ ಹುಡುಗರು ಈ ಹಾಡನ್ನು ನೋಡಿ. ಇದಲ್ಲದೆ ಎಲ್ಲ ಹುಡುಗಿಯರು ಸೇರಿ ನಾವು ಒಂದು ಹಾಡನ್ನು ಬರೆಯುತ್ತೇವೆ ಎಂದು ಪೋಸ್ಟ್‌ ಮಾಡಿದ್ದಾರೆ.

ಸದ್ಯ ಗೀತಾ ಗೋವಿಂದಂ ಚಿತ್ರ ಬಿಡುಗಡೆಯ ಹಂತದಲ್ಲಿದ್ದು, ಕನ್ನಡದ ನಟಿ ರಶ್ಮಿಕಾ ಮಂದಣ್ಣ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Comments are closed.