ರಾಷ್ಟ್ರೀಯ

ಬಿಜೆಪಿ ಸಂಸದರು ರಾಹುಲ್ ಗಾಂಧಿಯನ್ನು ನೋಡಿದರೆ ‘ತಬ್ಬಿ’ಬ್ಬಾಗಿ ಹಿಂದೆ ಸರಿಯುತ್ತಾರಂತೆ!

Pinterest LinkedIn Tumblr


ನವದೆಹಲಿ: ನಾನು ಪ್ರಧಾನಿ ಮೋದಿಯವರನ್ನು ಸಂಸತ್​ನಲ್ಲಿ ತಬ್ಬಿಕೊಂಡ ಬಳಿಕ ಬಿಜೆಪಿ ಸಂಸದರು ನನ್ನನ್ನು ನೋಡಿದ ಕೂಡಲೇ ಎರಡು ಹೆಜ್ಜೆ ಹಿಂದಕ್ಕೆ ಹೋಗುತ್ತಾರೆ. ಅವರನ್ನೂ ಎಲ್ಲಿ ಆಲಿಂಗಿಸಿಕೊಂಡುಬಿಡುತ್ತೇನೋ ಎಂಬ ಭಯ ಅವರಿಗೆ ಎಂದು ಸ್ವತಃ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಬುಧವಾರ ಹೇಳಿದ್ದಾರೆ.

ರಾಹುಲ್​ ಗಾಂಧಿ ಸಂಸತ್​ ಅಧಿವೇಶನದಲ್ಲಿ ಮೋದಿಯವರನ್ನು ಅಪ್ಪಿಕೊಂಡ ಬಳಿಕ ಬಿಜೆಪಿ ಮುಖಂಡರಿಂದ ತೀವ್ರ ಟೀಕೆಗೆ ಒಳಗಾಗಿದ್ದರು. ಆಡಳಿತ ಪಕ್ಷದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೇನೆ. ಅವರ ವಿರುದ್ಧ ಹೋರಾಟ ಮಾಡುತ್ತೇನೆ. ಆದರೆ ದ್ವೇಷ ಮಾಡುವುದಿಲ್ಲ ಎಂದು ರಾಹುಲ್​ ಹೇಳಿದ್ದರು.

ಪುಸ್ತಕ ಬಿಡುಗಡೆ ಸಂದರ್ಭವೊಂದರಲ್ಲಿ ಎಲ್​.ಕೆ.ಅಡ್ವಾಣಿ ಅವರ ಜತೆ ಗುರುವಾರ ವೇದಿಕೆ ಹಂಚಿಕೊಂಡಿದ್ದ ರಾಹುಲ್​ ಪ್ರಧಾನಿಯವರನ್ನು ತಾವು ತಬ್ಬಿಕೊಂಡ ವಿಷಯ ಪ್ರಸ್ತಾಪಿಸಿ, ದ್ವೇಷ ಮಾಡುವುದು ಬೇರೆ, ಹೋರಾಟ ಮಾಡುವುದು ಬೇರೆ. ವ್ಯತ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ದೇಶದ ವಿಚಾರದಲ್ಲಿ ಎಲ್​.ಕೆ.ಅಡ್ವಾಣಿ ಹಾಗೂ ನನ್ನ ಆಶಯಗಳು ಸಂಪೂರ್ಣ ತದ್ವಿರುದ್ಧವಾಗಿವೆ. ಅವರೊಂದಿಗೆ ಜಗಳವಾಡುತ್ತೇನೆ, ಪ್ರಶ್ನಿಸುತ್ತೇನೆ, ಆದರೆ ದ್ವೇಷ ಮಾಡುವುದಿಲ್ಲ. ನಾನು ಅವರನ್ನು ತಬ್ಬಿಕೊಳ್ಳುತ್ತೇನೆ ಮತ್ತು ಅವರೊಂದಿಗೆ ಹೋರಾಟ ಮಾಡುತ್ತೇನೆ ಎಂದು ಅಡ್ವಾಣಿಯವರ ಎದುರೇ ಹೇಳಿದರು.

ಒಂದು ಅಪ್ಪುಗೆ ಹೇಗೆಲ್ಲ ಕೆಲಸ ಮಾಡುತ್ತದೆ ಎಂದುಕೊಂಡಿರಲಿಲ್ಲ. ಈಗ ನಾನು ಎದುರು ಬಂದರೆ ಸಾಕು ಬಿಜೆಪಿ ಸಂಸದರು ಎರಡು ಹೆಜ್ಜೆ ಹಿಂದೆ ಹೋಗುವುದಲ್ಲದೆ, ಎಚ್ಚರಿಕೆ ರಾಹುಲ್​ ಬರುತ್ತಿದ್ದಾರೆ, ನಮ್ಮನ್ನೂ ತಬ್ಬಿಕೊಳ್ಳಬಹುದು ಎಂದು ಹೇಳುತ್ತಾರೆ ಎಂದು ನಕ್ಕರು.

Comments are closed.