2
ಬೆಂಗಳೂರು: ರಿವಾಲ್ವರ್ ರೀತಿಯ ಲೈಟರ್ನನ್ನು ಗನ್ ಎಂದು ಬೆದರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೊಬೈಲ್ ಅಂಗಡಿಯೊಂದರ ಮಾಲೀಕನಾಗಿರುವ ಆರೋಪಿ ಶ್ರೀನಾಥ್ ಲೈಟರ್ ಅನ್ನೇ ಗನ್ ಎಂದು ಬೆದರಿಸಿ ಪಾಯಿಂಟ್ ಬ್ಲಾಕ್‌ನಲ್ಲಿ ಲೈಟರ್ ಇಟ್ಟು ಅತ್ಯಾಚಾರ ಎಸಗಿದ್ದಾನೆ.
ಜು. 23ರಂದು ಕಾಲೇಜಿನಿಂದ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿ ಕೃತ್ಯ ಎಸಗಿ ನಂತರ ಆರೋಪಿ ಪರಾರಿಯಾಗಿದ್ದಾನೆ.
ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಾಗಿ ಶೋಧಕಾರ್ಯ ಕೈಗೊಂಡಿದ್ದರು. ಕೊನೆಗೂ ಆರೋಪಿ ಶ್ರೀನಾಥ್‌ನನ್ನು ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ.
Comments are closed.