ರಾಷ್ಟ್ರೀಯ

ಚಾಕಲೇಟು ಕಳ್ಳತನ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಮಹಿಳಾ ಪೊಲೀಸ್

Pinterest LinkedIn Tumblr


ಚೆನ್ನೈ: ಮಹಿಳಾ ಪೊಲೀಸ್ ಪೇದೆಯೊಬ್ಬರು ಸೂಪರ್ ಮಾರ್ಕೆಟ್‌ನಲ್ಲಿ ಚಾಕಲೇಟು ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಸಂಗ ಚೆನ್ನೈನ ಎಗ್ಮೋರ್‌ನಲ್ಲಿ ಬುಧವಾರ ನಡೆದಿದೆ.

ಕಳ್ಳತನ ಮಾಡಿ ಸಿಕ್ಕಿಬಿದ್ದ ಪೊಲೀಸ್ ಪೇದೆಯನ್ನು ಎಮ್. ನಂದಿನಿ (34) ಎಂದು ಗುರುತಿಸಲಾಗಿದೆ.

ಬುಧವಾರ ಮಧ್ಯಾಹ್ನ ಸೂಪರ್ ಮಾರ್ಕೆಟ್‌ಗೆ ಹೋಗಿದ್ದ ಆಕೆ, ಚಾಕಲೇಟು ಮತ್ತು ಸೊಳ್ಳೆ ನಿವಾರಕ ಕ್ರೀಮ್‌ನ್ನು ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದಾಳೆ. ಮಾಲ್ ಸಿಬ್ಬಂದಿಯೊಬ್ಬರು ಇದನ್ನು ಸಿಸಿ ಕ್ಯಾಮರಾದಲ್ಲಿ ನೋಡಿ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ.

ಈ ಕುರಿತು ಕೇಳಿದಾಗ ಆರೋಪ ನಿರಾಕರಿಸಿ ಲಗುಬಗೆಯಿಂದ ಹೊರಟ ಅವಳನ್ನು ಹಿಂಬಾಲಿಸಿ ಬ್ಯಾಗ್ ಕಸಿದುಕೊಂಡು ನೋಡಿದಾಗ ಚಾಕಲೇಟು ಕಂಡಿದೆ. ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡ ಪೇದೆ ಈ ಕುರಿತು ದೂರು ನೀಡಬೇಡಿ ಎಂದು ಅಂಗಲಾಚಿದ್ದಾಳೆ. 115 ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿರುವುದಾಗಿ ಲಿಖಿತ ತಪ್ಪೊಪ್ಪಿಗೆಯನ್ನು ಕೊಟ್ಟಿದ್ದಾಳೆ.

ಆಕೆ ಕ್ಷಮೆಯಾಚಿಸಿದ ಬಳಿಕ ಸೂಪರ್ ಮಾರ್ಕೆಟ್ ಸಿಬ್ಬಂದಿ ದೂರು ನೀಡದೇ ಸುಮ್ಮನಾಗಿದ್ದರು. ಆದರೆ, ಆರೋಪಿ ಪೇದೆಯ ಗಂಡ ಬಂದು ಸೂಪರ್ ಮಾರ್ಕೆಟ್ ವ್ಯವಸ್ಥಾಪಕ ಪ್ರಣವ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಪ್ರಣವ್ ಸಹಾಯಕ್ಕೆ ಆಗಮಿಸಿದ ಸಿಬ್ಬಂದಿ, ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ಈ ಎಲ್ಲ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಆದರೆ ಇನ್ನುವರೆಗೂ ದೂರು ದಾಖಲಾಗಿಲ್ಲ.

Comments are closed.