ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲದೇ ಹಲವು ವಿಚಾರಗಳಿಂದಾಗಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಕೊಹ್ಲಿ ತಮ್ಮ ಇನ್ ಸ್ಟಾಗ್ರಾಮ್ ಪೋಸ್ಚ್ ವೊಂದಕ್ಕೆ ತಾವು ಪಡೆಯುವ ಸಂಭಾವನೆಯಿಂದಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಭಾರತ ಕ್ರಿಕೆಟ್ ತಂಡ ನಾಯಕ ವಿರಾಟ್ ಕೊಹ್ಲಿ ಖ್ಯಾತ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿನ ಪೋಸ್ಟ್ ವೊಂದಕ್ಕೆ ಅತೀ ಹೆಚ್ಚು ಸಂಭಾವನೆ ಪಡೆಯುವ ಮೊದಲ ಭಾರತೀಯ ಕ್ರೀಡಾಪಟುವಾಗಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಕೊಹ್ಲಿ ಒಟ್ಟು 23.2 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದು, ಪ್ರತೀ ಪೋಸ್ಚ್ ಗೆ ಸುಮಾರು 82 ಲಕ್ಷ ಸಂಭಾವನೆ ಪಡೆಯುತ್ತಾರಂತೆ.
ಇನ್ನು ಇನ್ ಸ್ಟಾಗ್ರಾಮ್ ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಮತ್ತು ಪೋಸ್ಟ್ ವೊಂದಕ್ಕೆ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ ಜಂಟಿ 9ನೇ ಸ್ಥಾನದಲ್ಲಿದ್ದಾರೆ.
HopperHQ.com ವೆಬ್ ಸೈಟ್ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಪೋರ್ಚುಗಲ್ ತಂಡ ಫುಟ್ಬಾಲ್ ದಂತಕಥೆ, ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಅಗ್ರ ಸ್ಥಾನದಲ್ಲಿದ್ದು, ರೊನಾಲ್ಡೋ ಒಟ್ಟು 136 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಅಂತೆಯೇ ರೊನಾಲ್ಡೋ ತಮ್ಮ ಪ್ರತೀ ಇನ್ ಸ್ಟಾಗ್ರಾಮ್ ಪೋಸ್ಟ್ ಗೆ ಬರೊಬ್ಬರಿ 750,000 ಡಾಲರ್ (ಸುಮಾರು 5 ಕೋಟಿ 14 ಲಕ್ಷ) ಸಂಭಾವನೆ ಪಡೆಯುತ್ತಾರಂತೆ.
ಇನ್ನು ಕೊಹ್ಲಿ ಟೀಂ ಇಂಡಿಯಾ ನಾಯಕರಾದ ಬಳಿಕ ಮತ್ತು ಅವರು ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ವಿವಾಹವಾದ ಬಳಿಕ ಅವರ ಸೋಷಿಯಲ್ ಮೀಡಿಯಾ ಫಾಲೋವರ್ ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ವೆಬ್ ಸೈಟ್ ಹೇಳಿದೆ. ಕೇವಲ ಕೊಹ್ಲಿ ಮಾತ್ರವಲ್ಲದೇ ಅತನ ಪತ್ನಿ ನಟಿ ಅನುಷ್ಕಾ ಶರ್ಮಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ.
ಪಟ್ಟಿಯಲ್ಲಿ ಫುಟ್ಬಾಲ್ ಆಟಗಾರರದ್ದೇ ಪಾರುಪತ್ಯ
ಇನ್ನು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಫುಟ್ಬಾಲ್ ಕೂಡ ಒಂದು. ವಿಶ್ವದ ಬಹುತೇಕ ರಾಷ್ಟ್ರಗಳು ಫುಟ್ಬಾಲ್ ಆಡುತ್ತವೆ. ಇನ್ನು ಪ್ರಸ್ತುತ ಇನ್ ಸ್ಟಾಗ್ರಾಮ್ ಪೋಸ್ಟ್ ಗೆ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲೂ ಈ ಫುಟ್ಬಾಲಿಗರದ್ದೇ ಪಾರುಪತ್ಯ, ಪಟ್ಟಿಯ ಅಗ್ರ ಸ್ಥಾನವನ್ನು ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಆಕ್ರಮಿಸಿಕೊಂಡಿದ್ದರೆ, 2ನೇ ಸ್ಥಾನದಲ್ಲಿ ಬ್ರೆಜಿಲ್ ತಂಡ ಸ್ಚಾರ್ ಆಟಗಾರ ನೇಮರ್, ಮೂರನೇ ಸ್ಥಾನದಲ್ಲಿ ಅರ್ಜೆಂಟೀನಾ ತಂಡದ ಲಿಯೋನಲ್ ಮೆಸ್ಸಿ, ಆ ಬಳಿಕ ಇಂಗ್ಲೆಂಡ್ ತಂಡದ ಡೇವಿಡ್ ಬೆಕ್ಹಾಮ್, ವೇಲ್ಸ್ ಫುಟ್ಬಾಲ್ ತಂಡ ಗರೆತ್ ಬಲೆ, ಸ್ವೀಡನ್ ತಂಡದ ಜ್ಲಾಟನ್ ಇಬ್ರಾಹಿಮೊವಿಕ್ ಮತ್ತು ಉರುಗ್ವೆ ತಂಡದ ಲೂಯಿಸ್ ಸೌರೆಜ್ ಸ್ಥಾನ ಪಡೆದಿದ್ದಾರೆ.
ಇನ್ನು 8ನೇ ಸ್ಥಾನದಲ್ಲಿ ಯುಎಫ್ ಸಿ ಬಾಕ್ಸಿಂಗ್ ಸ್ಟಾರ್ ಕಾನರ್ ಮೆಕ್ಗ್ರೆಗರ್ ಇದ್ದು, ಇತ್ತೀಚೆಗೆ ಬಾಕ್ಸಿಂಗ್ ಸೂಪರ್ ಸ್ಟಾರ್ ಫ್ಲಾಯ್ಡ್ ಮೇವೆದರ್ ವಿರುದ್ಧ ನಡೆದ ಪಂದ್ಯದಲ್ಲಿ ಕಾನರ್ ಮೆಕ್ಗ್ರೆಗರ 50-0 ಅಂತರದಲ್ಲಿ ಜಯಭೇರಿ ಭಾರಿಸಿದ್ದರು. ಇನ್ನು ಹತ್ತನೇ ಸ್ಥಾನದಲ್ಲಿ ಅಮೆರಿಕದ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಸ್ಟೀಫನ್ ಕರಿ ಇದ್ದಾರೆ. ಇನ್ನು ವಿರಾಟ್ ಕೊಹ್ಲಿಅಗ್ರ 10ರ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಕ್ರೀಡಾಪಟುವಾಗಿದ್ದಾರೆ. ವಿರಾಟ್ ಕೊಹ್ಲಿಗೆ ಈಗಾಗಲೇ ಜಾಹೀರಾತುಗಳ ರಾಯಭಾರಿಯಾಗಿ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಈಗ ಒಂದೇ ಒಂದು ಇನ್ ಸ್ಟಾಗ್ರಾಂ ಪೋಸ್ಟ್ ಗೂ ವಿರಾಟ್ ಕೊಹ್ಲಿ ಇಷ್ಟೊಂ ಸಂಭಾವನೆ ಪಡೆಯುತ್ತಿರುವ ಕಾರಣವೇ ಅವರಿಂದು ಸಂಭಾವನೆ ವಿಚಾರದಲ್ಲಿ ದೇಶದ ನಂ.1 ಕ್ರೀಡಾ ಪಟುವಾಗಿದ್ದಾರೆ.
Comments are closed.