ಕಾಂಟ್ಯಾಕ್ಟ್ ಲೆನ್ಸ್ ಎಂಬುದು ಕಣ್ಣಿನ ದೋಷ ಸರಿಪಡಿಸುವ, ಕಣ್ಣನ್ನು ಸಹಜ ಸ್ಥಿತಿಗೆ ತರುವ ಅಥವ ಚಿಕಿತ್ಸೆಯ ಮೂಲಕ ಸರಿಪಡಿಸುವ ಮಸೂರವಾಗಿದೆ. ಇದನ್ನು ಸಾಮಾನ್ಯವಾಗಿ ಕಣ್ಣಿನ ಪಾರದರ್ಶಕ ಪಟಲದ ಮೇಲೆ ಅಳವಡಿಸಲಾಗುತ್ತದೆ.
1508ರಲ್ಲಿ ಕಾಂಟ್ಯಾಕ್ಟ್ ಲೆನ್ಸ್ಗಳ ಬಗ್ಗೆ ಕಲ್ಪನೆಯನ್ನು ಮೊದಲ ಬಾರಿಗೆ ವರ್ಣಿಸಿದ ಹಾಗು ಅವುಗಳ ರೇಖಾಚಿತ್ರಗಳನ್ನು ರಚಿಸಿದ ಕೀರ್ತಿ ಲಿಯೋನಾರ್ಡೋ ಡಾ ವಿಂಚಿಗೆ ಸಲ್ಲುತ್ತದೆ. ಅದಕ್ಕಿಂತ ಮುಂಚೆ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ವಾಸ್ತವವಾಗಿ ರಚಿಸಿ, ಅದನ್ನು ಕಣ್ಣಿನ ಮೇಲೆ ಧರಿಸಲಾಗುತ್ತಿತ್ತು. ಆಧುನಿಕ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಜೆಕ್ನ ರಸಾಯನವಿಜ್ಞಾನಿ ಒಟ್ಟೋ ವಿಚ್ಟೆರ್ಲೇ ಹಾಗು ಅವರ ಸಹಾಯಕ ಡ್ರಹೋಸ್ಲಾವ್ ಲಿಮ್ ಸಂಶೋಧಿಸಿದರು. ಜೊತೆಗೆ ಇವರು ಅದರ ತಯಾರಿಕೆಯಲ್ಲಿ ಬಳಸಲಾಗುವ ಜೆಲ್ ನ್ನೂ ಸಹ ಮೊದಲ ಬಾರಿಗೆ ಕಂಡುಹಿಡಿದರು.
ಕೆಲವು ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಗಳಿಗೆ ಮಸುಕಾದ ನೀಲಿ ಬಣ್ಣದ ಛಾಯೆಯನ್ನು ಬೆರಸಲಾಗುತ್ತದೆ. ಇವುಗಳನ್ನು ಶುದ್ಧಗೊಳಿಸುವ ಹಾಗು ಸಂಗ್ರಹಣಾ ದ್ರಾವಣದಲ್ಲಿ ಮುಳುಗಿಸಿದಾಗ ಹೆಚ್ಚು ಚೆನ್ನಾಗಿ ಕಾಣುತ್ತದೆ. ಕೆಲವು ಮಸೂರಗಳಿಗೆ, ಕಣ್ಣಿನ ದೃಷ್ಟಿಯನ್ನು ಬದಲಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಬಣ್ಣವನ್ನು ನೀಡಲಾಗುತ್ತದೆ. ಕಣ್ಣಿನ ಸ್ವಾಭಾವಿಕ ಮಸೂರಕ್ಕೆ UV(ನೇರಳಾತೀತ ವಿಕಿರಣ)ಯಿಂದ ಉಂಟಾಗುವ ಹಾನಿಯನ್ನು ತಗ್ಗಿಸಲು ಕೆಲವು ಮಸೂರಗಳು ಇದೀಗ UV ರಕ್ಷಿತ ಮೇಲ್ಮೈ ಸಂಸ್ಕರಣೆಯನ್ನು ಒಳಗೊಂಡಿರುತ್ತದೆ.
1. ನಿಮ್ಮ ಕಣ್ಣಿನ ಸಂಪೂರ್ಣ ಪರೀಕ್ಷೆಗಾಗಿ ವರ್ಷಕ್ಕೊಮ್ಮೆ ವೃತ್ತಿಪರ ವೈದ್ಯರನ್ನು ಭೇಟಿ ಮಾಡಿ ಅಥವ ನಿಮ್ಮ ವೈದ್ಯರ ನಿರ್ದೇಶನದ ಮೇರೆಗೆ ಕಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಳ್ಳಿ.
2. ವೈದ್ಯಕೀಯವಾಗಿ ಅಂಗೀಕರಿಸಿದ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಮತ್ತು ಪರವಾನಗಿ ಹೊಂದಿರುವ ಕಣ್ಣಿನ ವೈದ್ಯರ ಸೂಚನೆಯ ಮೇರೆಗೆ ಮಾತ್ರ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಬಳಸಿ.
3. ಕಾಂಟ್ಯಾಕ್ಟ್ ಲೆನ್ಸ್ ಅನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಎಂದಿಗೂ ಬದಲಾಯಿಸಕೊಳ್ಳಬೇಡಿ.
4. ನಿಗದಿತಕ್ಕಿಂತ ಹೆಚ್ಚು ಲೆನ್ಸ್ಗಳನ್ನು ಧರಿಸಬೇಡಿ, ನಿದ್ರೆ ಮಾಡುವಾಗಲೂ ಧರಿಸುವ ಅವಶ್ಯಕತೆ ಇರುವುದಿಲ್ಲ.
5. ಕಣ್ಣುಗಳು ಕೆಂಪಾದರೆ ಅಥವಾ ಕಿರಿಕಿರಿ ಸಂಭವಿಸಿದಾಗ, ಮಸೂರವನ್ನು ತಕ್ಷಣ ತೆಗೆದುಹಾಕಿ ಮತ್ತು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
Comments are closed.