ಭಟ್ಕಳ: ಪ್ರವಾಸಕ್ಕೆಂದು ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ಸಮುದ್ರಕ್ಕಿಳಿದಾಗ ಅಲೆಗಳ ಹೊಡೆತಕ್ಕೆ ಸಿಕ್ಕು ಮುಳುಗಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಬೆಂಗಳೂರಿನ ಕಿರಣಕುಮಾರ್ (18) ಸಮುದ್ರದಲ್ಲಿ ಮುಳುಗಿದ ಯುವಕ ಎನ್ನಲಾಗಿದ್ದು ಈತ ಒಂಭತ್ತು ಮಂದಿ ಕುಟುಂಬ ಸದಸ್ಯರೊಡನೆ ಮುರುಡೇಶ್ವರ ಪ್ರವಾಸಕ್ಕಾಗಿ ಆಗಮಿಸಿದ್ದ. ಇದರಲ್ಲಿ ನಾಲ್ವರು ಸಮುದ್ರಕ್ಕೆ ಇಳಿದು ಅಲೆಗಳೊಡನೆ ಆಟವಾಡುತ್ತಿದ್ದರು. ಆಗ ಅಲೆಗಳ ಅಬ್ಬರ ಜೋರಾಗಿದ್ದ ಕಾರಣ ಇಬ್ಬರು ಅಪಾಯದಲ್ಲಿ ಸಿಲುಕಿದ್ದಾರೆ.
ಇದನ್ನು ಗಮನಿಸಿದ ಸ್ಥಳೀಯರು ಹಾಗೂ ರಕ್ಷಣಾ ತಂಡ ತಕ್ಷಣ ಕಾರ್ಯಪ್ರವೃತ್ತವಾಗಿದ್ದು ಕಾರ್ತಿಕ್ ಮುನಿರಾಜು (20) ಎನ್ನುವ ಒಬ್ಬನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ,. ಆದರೆ ಕಿರಣಕುಮಾರ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಬೆಂಗಳೂರಿನ ಯಲಹಂಕದ ಮೂಲದ ಕಿರಣಕುಮಾರ್ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಘಟನೆ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.