ಭುವನೇಶ್ವರ: ಯುವಕನೊಬ್ಬ ತನ್ನ ಮಾಜಿ ಪ್ರಿಯತಮೆಯ ಜೊತೆಗಿದ್ದ ಫೋಟೋ ಮತ್ತು ವಿಡಿಯೋವನ್ನು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.
ಮಯೂರ್ಭಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ತನ್ನ ಮಾಜಿ ಪ್ರಿಯತಮೆ ಬೇರೆ ಹುಡುಗನೊಂದಿಗೆ ಮದುವೆಯಾದ ಬಗ್ಗೆ ತಿಳಿದುಕೊಂಡು ಬಳಿಕ ಆತ ತನ್ನ ಫೇಸ್‍ಬುಕ್ ನಲ್ಲಿ ಆಕೆಯೊಂದಿಗಿದ್ದ ಸಂಬಂಧದ ಬಗ್ಗೆ ಬರೆದುಕೊಂಡಿದ್ದಾನೆ.
ಅಷ್ಟೇ ಅಲ್ಲದೇ ಆತ ಎರಡು ದಿನಗಳ ಹಿಂದೆ ನನ್ನ ಮಾಜಿ ಪ್ರಿಯತಮೆ ಬೇರೆಯೊಬ್ಬ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ ಎಂದು ಬರೆದಿದ್ದಾನೆ. ಜೊತೆಗೆ ನಾನು ಆಕೆಗೆ ನೋವುಂಟು ಮಾಡಿದ್ದೀನಿ. ಈ ಫೋಟೋ ಮತ್ತು ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿಯೂ ಬರೆದು ಕೊಂಡಿದ್ದಾನೆ.
ಈ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಬಗ್ಗೆ ಯಾರೂ ಪೊಲೀಸರಿಗೆ ದೂರು ನೀಡಿಲ್ಲ. ಆದ ಕಾರಣ ಈ ಕುರಿತು ಯಾವುದೇ ರೀತಿ ಪೊಲೀಸ್ ಕಂಪ್ಲೆಂಟ್ ದಾಖಲಾಗಿಲ್ಲ.
Comments are closed.