ರಾಷ್ಟ್ರೀಯ

ಪಾಕ್‌ ನಾಯಕ ಇಮ್ರಾನ್‌ ಖಾನ್ ಸ್ನೇಹದ ಕೊಡುಗೆ ಸ್ವೀಕರಿಸಿ: ಮೋದಿಗೆ ಮೆಹಬೂಬ

Pinterest LinkedIn Tumblr


ಶ್ರೀನಗರ : ಜಮ್ಮು ಕಾಶ್ಮೀರದಲ್ಲಿನ ರಕ್ತಪಾತವನ್ನು ತಡೆಯಲು ಪಾಕಿಸ್ಥಾನದ ಹೊಸ ನಾಯಕ, ಪಾಕಿಸ್ಥಾನ್‌ ತೆಹರೀಕ್‌ ಎ ಇನ್ಸಾಫ್ ಪಕ್ಷದ ಮುಖ್ಯಸ್ಥ, ಇಮ್ರಾನ್‌ ಖಾನ್‌ ನೀಡಿರುವ ಸ್ನೇಹದ ಕೊಡುಗೆಯನ್ನು ಸ್ವೀಕರಿಸುವಂತೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕೋರಿದ್ದಾರೆ.

ಇಮ್ರಾನ್‌ ಖಾನ್‌ ಅವರು ಪಾಕ್‌ ಮಹಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿದ ಬಳಿಕ ಮಾಡಿದ ಮೊದಲ ಸಾರ್ವಜನಿಕ ಭಾಷಣದಲ್ಲಿ “ಪಾಕಿಸ್ಥಾನ ಭಾರತದೊಂದಿಗಿನ ಸಂಬಂಧಗಳನ್ನು ಸುಧಾರಿಸಲು ಸಿದ್ಧವಿದೆ; ಕಾಶ್ಮೀರವೂ ಸೇರಿದಂತೆ ಎಲ್ಲ ವಿಷಯಗಳನ್ನು ಇತ್ಯರ್ಥ ಪಡಿಸುವುದಕ್ಕೆ ಉಭಯ ದೇಶಗಳ ನಾಯಕರು ಮಾತುಕತೆ ನಡೆಸುವ ಅಗತ್ಯವಿದೆ’ ಎಂದು ಹೇಳಿದ್ದರು.

ಪಾಕ್‌ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗಳಲ್ಲಿ ಇಮ್ರಾನ್‌ ಖಾನ್‌ ಅವರ ಪಿಟಿಐ ಪಕ್ಷ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದಿದ್ದು ಇಮ್ರಾನ್‌ ಅವರು ದೇಶದ ಪ್ರಧಾನಿಯಾಗುವುದು ಖಚಿತವಿದೆ.

Comments are closed.