ಹೊಸದಿಲ್ಲಿ : ಒಂದು ವರ್ಷದ ದಾಂಪತ್ಯದೊಳಗೇ ವಿರಸ ಉಂಟಾದ ಕಾರಣಕ್ಕೆ ಮನನೊಂದ 21ರ ಹರೆಯದ ಮಹಿಳೆ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಡ ಘಟನೆ ಇಲ್ಲಿನ ನಿಹಾಲ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.
ನಿಹಾಲ್ ವಿಹಾರ್ನ ಶಿವರಾಮ್ ಪಾರ್ಕ್ ಕಾಲನಿಯಲ್ಲಿ ಪತಿಯೊಂದಿಗೆ ವಾಸವಾಗಿದ್ದ ಮಹಿಳೆಯು ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಕುತ್ತಿಗೆಯಲ್ಲಿ ನೇಣು ಬಿಗಿದ ಬಟ್ಟೆಯ ಗುರುತಲ್ಲದೆ ಬೇರೆ ಯಾವುದೇ ರೀತಿಯ ಗಾಯದ ಗುರುತುಗಳು ದೇಹದ ಮೇಲೆ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಪತಿ ಹಾಗೂ ಆಕೆಯ ಹೆತ್ತವರ ಹೇಳಿಕೆಯನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟರ ಮುಂದೆ ದಾಖಲಿಸಿಕೊಳ್ಳಲಾಗುವುದು ಎಂದಿರುವ ಪೊಲೀಸ್ ಅಧಿಕಾರಿ, ಅವರ ಹೇಳಿಕೆಗಳ ಆಧಾರದಲ್ಲಿ ವರದಕ್ಷಿಣೆ ಕೇಸು ದಾಖಲಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ತನಿಖೆ ನಡೆಯುತ್ತಿದೆ.
Comments are closed.