ಅಂತರಾಷ್ಟ್ರೀಯ

ಇಂಡೊನೇಷ್ಯಾದ ಲಾಂಬೊಕ್ ದ್ವೀಪ ಪ್ರದೇಶದಲ್ಲಿ ಪ್ರಬಲ ಭೂಕಂಪ : 10 ಸಾವು, 40 ಮಂದಿಗೆ ಗಾಯ

Pinterest LinkedIn Tumblr

ಲಾಂಬೊಕ್: ಇಂಡೊನೇಷ್ಯಾದ ಲಾಂಬೊಕ್ ದ್ವೀಪ ಪ್ರದೇಶದಲ್ಲಿ ವಾರಾಂತ್ಯ ದಿನವಾದ ಇಂದು 6.4 ರಷ್ಟು ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಘಟನೆಯಲ್ಲಿ ಹಲವು ಮನೆಗಳು ಹಾನಿಗೊಂಡಿವೆ ಎಂದು ಇಂಡೊನೇಷ್ಯಾ ವಿಪತ್ತು ನಿರ್ವಹಣಾ ತಂಡದ ವಕ್ತಾರ ಸುಟೊಪೊ ಪುರ್ವೊ ನ್ಯೂಗ್ರೋಹೊ ಹೇಳಿದ್ದಾರೆ.

ಭೂಕಂಪನದ ಮಾಹಿತಿಯನ್ನು ಸರಿಯಾಗಿ ಸಂಗ್ರಹಿಸುತ್ತಿಲ್ಲವಾದ್ದರಿಂದ ಸಾವಿನ ಸಂಖ್ಯೆಯು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಅಂದಾಜಿಸಲಾಗಿದೆ ಎಂದು ನುಗ್ರ್ರೋ ತಿಳಿಸಿದ್ದಾರೆ.

ಲಾಂಬೊಕ್ ದಕ್ಷಿಣ ಇಂಡೊನೇಷ್ಯಾದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಬಾಲಿ ರೆಸಾರ್ಟ್ ದ್ವೀಪದ 100 ಕಿಮೀ ಪೂರ್ವಕ್ಕೆ ಇದೆ. ಇಂಡೊನೇಷ್ಯಾದ ಸಾವಿರಾರು ದ್ವೀಪಸಮೂಹವು ಈ ಪ್ರದೇಶದಲ್ಲಿದ್ದು, ಪ್ರಸಿದ್ಧ ಹಾಟ್ ಸ್ಪಾಟ್ ಕೇಂದ್ರವಾಗಿಯೂ ಕರೆಯಲ್ಪಡುತ್ತದೆ.

ಇಲ್ಲಿ ಆಗಾಗ್ಗೇ ಭೂಕಂಪ ಸಂಭವಿಸುತ್ತಲೇ ಇರುತ್ತದೆ. ಕೆಲವೊಂದು ವೇಳೆಯಲ್ಲಿ ಈ ಪ್ರದೇಶದಲ್ಲಿ ಸುನಾಮಿಯ ಮುಂಜಾಗ್ರತೆಯ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ.

2004ರಲ್ಲಿ ಸುಮಾತ್ರ ದ್ವೀಪ ಪ್ರದೇಶದಲ್ಲಿ 9.3 ರಷ್ಟು ತೀವ್ರತೆಯ ಭೂಕಂಪನದಿಂದಾಗಿ ಸುನಾಮಿ ಅಪ್ಪಳಿಸಿತ್ತು. ಇದರಿಂದಾಗಿ ಇಂಡೊನೇಷ್ಯಾದ 1 , 68 000ಮಂದಿ ಸೇರಿದಂತೆ ಹಿಂದೂ ಮಹಾಸಾಗರದಲ್ಲಿ 2 ಲಕ್ಷದ 20 ಸಾವಿರ ಜನರು ಮೃತಪಟ್ಟಿದ್ದರು.

Comments are closed.