ರಾಷ್ಟ್ರೀಯ

ಭಾರೀ ಮಳೆ: ಆಸ್ಪತ್ರೆಯ ಐಸಿಯುನಲ್ಲೇ ಹರಿದಾಡಿದ ಮೀನುಗಳು

Pinterest LinkedIn Tumblr


ಪಾಟ್ನಾ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಿಹಾರದ ಪಾಟ್ನಾದಲ್ಲಿನ ನಳಂದ ಮೆಡಿಕಲ್ ಕಾಲೇಜ್ ಆಸ್ಪತ್ರೆಯೊಳಗೆ ಮಳೆನೀರಿನ ಜೊತೆಗೆ ಮೀನುಗಳು ಬಂದಿದ್ದು, ಐಸಿಯುನಲ್ಲಿ ಹರಿದಾಡುತ್ತಿವೆ.

ನಳಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ರೋಗಿಗಳು ಹಾಸಿಗೆ ಮೇಲೆ ಮಲಗಿದ್ದರೆ ಕೊಠಡಿಯಲ್ಲಿ ಸುಮಾರು ಒಂದು ಅಡಿಯಷ್ಟು ನೀರು ತುಂಬಿಕೊಂಡಿದೆ. ಅಲ್ಲದೇ ಈ ನೀರಿನಲ್ಲಿ ಮೀನುಗಳು ಈಜಾಡುತ್ತಿರುವುದು ಭಾರಿ ಸುದ್ದಿ ಮಾಡುತ್ತಿದೆ.

ಪಾಟ್ನಾದ ಎರಡನೇ ದೊಡ್ಡ ಆಸ್ಪತ್ರೆಗೆ ಮಳೆ ನೀರು ನುಗ್ಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಆರೋಗ್ಯಾಧಿಕಾರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಮಳೆನೀರನ್ನು ಆಸ್ಪತ್ರೆಯಿಂದ ಹೊರಹಾಕುವ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದಿದ್ದಾರೆ.

ಶುಕ್ರವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ. ಆಗಸ್ಟ್ 1ರವರೆಗೂ ಬಿಹಾರದ ಹಲವೆಡೆ ಇನ್ನೂ ಹೆಚ್ಚಿನ ಪ್ರಮಾಣದ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Comments are closed.