(ಸಾಂದರ್ಭಿಕ ಚಿತ್ರ)
ಮಂಗಳೂರು ಜುಲೈ 30: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದಿಂದ ಮಂಗಳೂರು-ತಿರುಪತಿ ಮಲ್ಟಿಎಕ್ಷಲ್ ಸಾರಿಗೆಯಲ್ಲಿ ತಿರುಮಲ ಹಾಗೂ ಶ್ರೀ ಕಾಳಹಸ್ತಿಗೆ ಪಾಕೇಜ್ ಪ್ರವಾಸವನ್ನು ಪ್ರಾರಂಭಿಸಲಾಗಿದೆ.
ಮಂಗಳೂರಿನಿಂದ ಹೊರಡುವ ಪ್ಯಾಕೇಜ್ ಪ್ರವಾಸವು ನಿಗಮದ ಸಾರಿಗೆಯಲ್ಲಿ ಪ್ರಯಾಣದೊಂದಿಗೆ ಹೊಟೇಲ್ನಲ್ಲಿ ಫ್ರೆಶ್ಅಪ್, ಉಪಹಾರ, ಊಟ, ಪ್ರತಿ ಟಿಕೇಟಿನ 2 ಲಡ್ಡು, ತಿರುಮಲದಲ್ಲಿ ಶೀಘ್ರ ದರ್ಶನ, ಸ್ಥಳೀಯ ಪದ್ಮಾವತಿ ದೇವಾಲಯ ದರ್ಶನ, ತಿರುಪತಿ-ಶ್ರೀಕಾಳಹಸ್ತಿ ಮತ್ತು ಹಿಂದಕ್ಕೆ ಸಾರಿಗೆ ವ್ಯವಸ್ಥೆ ಹಾಗೂ ರಾತ್ರಿ ತಂಗುವಿಕೆಯನ್ನೂ ಸಹ ಒಳಗೊಂಡಿರುತ್ತದೆ.
ಸದರಿ ಮಂಗಳೂರು-ತಿರುಮಲ(ಕಾಳಹಸ್ತಿ ಒಳಗೊಂಡು) ಐರಾವತ ಕ್ಲಬ್ ಕ್ಲಾಸ್ ಸಾರಿಗೆಗೆ ಪ್ಯಾಕೇಜ್ ಪ್ರವಾಸ ಒಟ್ಟು ಪ್ರಯಾಣದರದ ವಿವರ ಈ ಕೆಳಕಂಡಂತೆ ನಿಗದಿಪಡಿಸಲಾಗಿರುತ್ತದೆ. ಸದರಿ ಪ್ಯಾಕೇಜ್ ಪ್ರವಾಸಕ್ಕೆ www.ksrtc.in ವೆಬ್ಸೈಟ್ ನಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಇರುತ್ತದೆ.
ಮಂಗಳೂರು-ತಿರುಪತಿ –ಶುಕ್ರವಾರ ಹೊರತುಪಡಿಸಿ ಎಲ್ಲಾ ದಿನಗಳು ಒಟ್ಟು ದರ ರೂ: ವಯಸ್ಕರಿಗೆ – 5100, ಮಕ್ಕಳಿಗೆ – 4100
ಶುಕ್ರವಾರದ ದಿನ – ವಯಸ್ಕರಿಗೆ -ರೂ.5400 , ಮಕ್ಕಳಿಗೆ – ರೂ.4300.
ಪ್ಯಾಕೇಜ್ ಪ್ರವಾಸ ಸಾರಿಗೆಯು ಹೊರಡುವ ವೇಳಾ ವಿವರ ಈ ಕೆಳಗಿನಂತಿದೆ.
ದಿನ-1 ಮಂಗಳೂರು ನಿರ್ಗಮನ ಸಮಯ 12 ಘಂಟೆ
ದಿನ-2 ತಿರುಪತಿ ದರ್ಶನ /ಕಾಳಹಸ್ತಿಯಲ್ಲಿ ತಂಗುವಿಕೆ
ದಿನ-3 ತಿರುಮತಿ ನಿರ್ಗಮನ ಸಮಯ 18:00
ದಿನ-4 ಮಂಗಳೂರಿಗೆ ಆಗಮನ
ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ನಿಯಂತ್ರಣಾಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಮಂಗಳೂರು ವಿಭಾಗ, ಬಿಜೈ, ಮಂಗಳೂರು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
Comments are closed.