ರಾಷ್ಟ್ರೀಯ

ಕಚ್ಚಾ ರಸ್ತೆಯನ್ನು ತಪ್ಪಿಸುವ ಭರದಲ್ಲಿ ಟೆಕ್ಕಿ ಬಲಿ

Pinterest LinkedIn Tumblr


ಅಹಮದಾಬಾದ್‌: ಕಚ್ಚಾ ರಸ್ತೆಯನ್ನು ತಪ್ಪಿಸುವ ಭರದಲ್ಲಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಜೀವಕಳೆದುಕೊಂಡಿದ್ದಾರೆ.

ಜಮ್ಮು ಮೂಲದ ಸುಶೀಲ್‌ ಪಂಡಿತ (39) ರಸ್ತೆಯ ಒರಟು ಮೇಲ್ಮೈಯನ್ನು ತಪ್ಪಿಸಲು ಪ್ರಯತ್ನಿಸಿ, ಟೆಂಪೋವೊಂದರ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಮುಂಡ್ವ ಸಮೀಪ ಟೆಂಪೋವನ್ನು ಓವರ್‌ಟೇಕ್‌ ಮಾಡಲೂ ಮುಂದೆ ಬಂದಿದ್ದಾರೆ. ಈ ವೇಳೆ ಕಲ್ಲುಗಳಿದ್ದ ರಸ್ತೆಯ ಭಾಗವನ್ನು ಸುಶೀಲ್‌ ತಪ್ಪಿಸಲು ಯತ್ನಿಸಿದ್ದಾರೆ. ಈ ವೇಳೆ ಬೈಕ್‌ ನಿಯಂತ್ರಣ ತಪ್ಪಿ ಬಿದ್ದಿದೆ. ಸುಶೀಲ್‌ ಟೆಂಪೋದ ಹಿಂಭಾಗದ ಚಕ್ರದ ಅಡಿಗೆ ಬಿದ್ದಿದ್ದಾರೆ. ತಕ್ಷಣ ಸುಶೀಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮುಂಡ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟೆಂಪೋ ಡ್ರೈವರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ, ರಸ್ತೆಯಲ್ಲಿದ್ದ ಗುಂಡಿಗೆ ತಾತ್ಕಾಲಿಕವಾಗಿ ಮಣ್ಣು ಹಾಗೂ ಸಿಮೆಂಟ್‌ ಹುಡಿಯನ್ನು ತುಂಬಲಾಗಿತ್ತು. ಇದರ ಮೇಲೆ ಸಾಗುವಾಗ ಅವಘಡ ಸಂಭವಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಸುಶೀಲ್‌ಗೆ ನಿಶ್ಚಿತಾರ್ಥವಾಗಿತ್ತು. ಆ.4ಕ್ಕೆ ಅವರು ಜಮ್ಮು ಗೆ ತೆರಳಲು ವಿಮಾನ ಟಿಕೆಟ್‌ ಕಾಯ್ದಿರಿಸಿದ್ದರು ಎಂದು ತಿಳಿದು ಬಂದಿದೆ. ಸುಶೀಲ್‌ ಕುಟುಂಬ ವರ್ಗಕ್ಕೆ ಮರಣೋತ್ತರ ಪರೀಕ್ಷೆ ಬಳಿಕ ದೇಹ ಹಸ್ತಾಂತರಿಸಲಾಗಿದೆ.

ರಸ್ತೆ ಸರಿ ಇಲ್ಲದೆ ಆಗುವ ಅಫಘಾತಗಳ ಬಗ್ಗೆ ಪುಣೆ ಮುನ್ಸಿಪಲ್‌ ಕಾರ್ಪೋರೇಷನ್‌ಗೆ ಮಾಹಿತಿ ನೀಡಲಾಗುತ್ತದೆ. ಅಂತಹ ಸಮಸ್ಯೆಗಳನ್ನು ಬಗೆಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಇತ್ತೀಚೆಗೆ ಪೊಲೀಸ್‌ ಇಲಾಖೆಯಿಂದಲೇ ರಸ್ತೆ ಗುಂಡಿಗಳ ಬಗ್ಗೆ ತಿಳಿಯಲು ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಅವರು ರಸ್ತೆ ಸರಿಪಡಿಸುವಂತೆಯೂ ತಿಳಿಸಲಾಗಿತ್ತು ಎಂದು ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ ವಿವೇಕ್‌ ವಖಾರೆ ಹೇಳಿದ್ದಾರೆ.

Comments are closed.