ರಾಷ್ಟ್ರೀಯ

ಬಿಜೆಪಿ ಶಾಸಕಿಯಿಂದ  ದೇವಸ್ಥಾನ ಪ್ರವೇಶ: ಗಂಗಾಜಲದಿಂದ ಶುದ್ಧೀಕರಣ!

Pinterest LinkedIn Tumblr


ಹಮಿರ್​ಪುರ್​(ಉತ್ತರಪ್ರದೇಶ): ಬಿಜೆಪಿ ಶಾಸಕಿಯೊಬ್ಬರು ಹಮೀರ್​ಪುರ್​ ಪಟ್ಟಣದಲ್ಲಿರುವ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಗಂಗಾಜಲದಿಂದ ದೇವಾಲಯವನ್ನು ಸ್ವಚ್ಛಗೊಳಿಸಿ, ಶುದ್ಧೀಕರಣಕ್ಕಾಗಿ ದೇವತೆಗಳ ವಿಗ್ರಹವನ್ನು ಅಲಹಾಬಾದ್​ಗೆ ಕಳುಹಿಸಲಾಗಿದೆ.

ಶಾಸಕಿ ಮನೀಶಾ ಅನುರಾಗಿ ಅವರು ಜುಲೈ 12ರಂದು ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮವನ್ನು ಮುಗಿಸಿ, ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಇದುವರೆಗೂ ಯಾವೊಬ್ಬ ಮಹಿಳೆಯೂ ದೇವಸ್ಥಾನವನ್ನು ಪ್ರವೇಶಿಸಿಲ್ಲ. ಇಲ್ಲಿ ಮಹಿಳೆಯ ಪ್ರವೇಶಕ್ಕೆ ಅನುಮತಿಯಿಲ್ಲ. ಶಾಸಕಿ ಮನೀಶಾ ಅನುರಾಗಿ ಅವರು ದೇವಸ್ಥಾನದ ಆವರಣದೊಳಗೆ ಪ್ರವೇಶ ಮಾಡಿದ ದಿನ ನಾನು ಅಲ್ಲಿ ಇರಲಿಲ್ಲ. ನಾನೇನಾದರೂ ಅಲ್ಲಿದ್ದರೆ, ಪ್ರವೇಶಿಸಲು ಬಿಡುತ್ತಿರಲಿಲ್ಲ ಎಂದು ದೇವಸ್ಥಾನದ ಅರ್ಚಕರೊಬ್ಬರು ತಿಳಿಸಿದ್ದಾರೆ.

ಈ ರೀತಿ ಮಾಡುವುದರಿಂದ ಮಹಿಳೆಯರಿಗೆ ಅಪಮಾನ ಮಾಡಿದ್ದಂತೆ. ಅಲ್ಫ ಬುದ್ಧಿಯ ಜನರು ಮಾತ್ರ ಈ ರೀತಿ ಮಾಡುತ್ತಾರೆ ಎಂದು ಶಾಸಕಿ ಅನುರಾಗಿ ಅಸಮಾಧಾನ ಹೊರಹಾಕಿದ್ದಾರೆ.

ದೇವಸ್ಥಾನವು ಮಹಾಭಾರತ ಕಾಲದಿಂದಲೂ ಇರುವುದಾಗಿ ಜನರು ನಂಬಿದ್ದು, ಅಂದಿನಿಂದ ಮಹಿಳೆಯರಿಗೆ ಪ್ರವೇಶವಿಲ್ಲ. ಅವರು ಹೊರಗಡೆ ನಿಂತು ಪ್ರಾರ್ಥಿಸಬಹುದಾಗಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

Comments are closed.