ಕರಾವಳಿ

ಐಷಾರಾಮಿ ವಸ್ತುವಿನ ಬಳಕೆಯಿಂದಾಗುವ ಅಡ್ಡಪರಿಣಾಮಗಳು ತಿಳಿದಿದೆಯೇ.?

Pinterest LinkedIn Tumblr

ಹವಾ ನಿಯಂತ್ರಕವು (ಏರ್​​ ಕಂಡೀಷನರ್​​) ಆರಾಮ ಮತ್ತು ಸಂಪೂರ್ಣ ಐಷಾರಾಮಿಗೆ ಪರ್ಯಾಯ ಪದವಾಗಿದೆ. ಇತ್ತೀಚಿನ ದಿನಗಳಲ್ಲಿ ನಿಮ್ಮ ಮಲಗುವ ಕೋಣೆ, ವಾಸದ ಕೋಣೆ, ಕಚೇರಿ, ಚಲನಚಿತ್ರ ಮಂದಿರಗಳು, ಶೋ ರೂಮ್​ಗಳು ಮತ್ತು ಇತರ ಎಲ್ಲ ಸ್ಥಳಗಳು ಹವಾನಿಯಂತ್ರಿತವಾಗಿವೆ. ಹವಾ ನಿಯಂತ್ರಕಗಳು ಈಗಿನ ಜನರ ಜೀವನದಲ್ಲಿ ಬಹಳ ಮುಖ್ಯವಾದ ಭಾಗವಾಗಿದೆ ಮತ್ತು ಅದನ್ನು ಖರೀದಿಸುವ ಹಾಗೂ ಸ್ಥಾಪಿಸುವ ಮೊದಲು ಯಾರು ಸಹ ಅದರ ಅನುಕೂಲ ಹಾಗೂ ಅನಾನುಕೂಲದ ಬಗ್ಗೆ ಯೋಚಿಸುವುದಿಲ್ಲ. ಆದರೆ ಈ ಐಷಾರಾಮಿ ವಸ್ತುವಿನ ಅಡ್ಡಪರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆಯೇ.? ಈ ಹವಾ ನಿಯಂತ್ರಕಗಳು ಪರಿಸರಕ್ಕೆ ಹಾನಿಮಾಡುವುದನ್ನು ತಪ್ಪಿಸಿ ಹಾಗೂ ನಿಮ್ಮ ದೇಹಕ್ಕೆ ಆಗಬಹುದಾದಂತಹ ಅಡ್ಡಪರಿಣಾಮಗಳನ್ನೂ ಸಹ ತಪ್ಪಿಸಿ. ಹವಾ ನಿಯಂತ್ರಕದಿಂದ ನಿಮ್ಮ ದೇಹದ ಮೇಲೆ ಉಂಟಾಗಬಹುದಾದ ಅಡ್ಡ ಪರಿಣಾಮಗಳು ಇಲ್ಲಿವೆ ನೋಡಿ.

1. ನಿರ್ಜಲೀಕರಣ:
ನೀವು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತುಕೊಂಡಾಗ ಸಾಮಾನ್ಯವಾಗಿ ನೀವು ನಿರ್ಜಲೀಕರಣಗೊಳ್ಳುತ್ತೀರಿ. ಏಕೆಂದರೆ ಇದು ಕೊಠಡಿಯಲ್ಲಿನ ಎಲ್ಲಾ ತೇವಾಂಶವನ್ನು ಹೀರಿಕೊಂಡು ಕೊಠಡಿಯನ್ನು ತಣ್ಣಗೆ ಹಾಗೂ ಒಣಗಿರುವಂತೆ ಮಾಡುತ್ತದೆ. ಶೀತದಿಂದಾಗಿ ನೀವು ನೀರನ್ನು ಕುಡಿಯುವುದಿಲ್ಲ ಇದರ ಪರಿಣಾಮವಾಗಿ ನಮ್ಮ ದೇಹ ನಿರ್ಜಲೀಕರಣಗೊಳ್ಳುತ್ತದೆ.

2. ತಲೆನೋವು:
ದೀರ್ಘಕಾಲದವರೆಗೆ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತುಕೊಳ್ಳುವುದು ತಲೆನೋವು ಬರುವುದಕ್ಕೆ ಕಾರಣವಾಗಬಹುದು. ನೀವು ಹವಾನಿಯಂತ್ರಿತ ಕೋಣೆಯನ್ನು ಚೆನ್ನಾಗಿ ನಿರ್ವಹಿಸದಿದ್ದರೆ, ನೀವು ಮೈಗ್ರೇನ್​​ಗೆ ಒಳಗಾಗುವಿರಿ. ಇದರ ಇನ್ನೊಂದು ಕಾರಣವೆಂದರೆ ನಿರ್ಜಲೀಕರಣ. ಹೌದು, ನಿರ್ಜಲೀಕರಣವು ಸಹ ತಲೆನೋವು ಬರುವುದಕ್ಕೆ ಒಂದು ಕಾರಣವಾಗಿದೆ, ಜನರು ಸಾಮಾನ್ಯವಾಗಿ ಇದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.

3. ಒಣ ಚರ್ಮ:
ದೀರ್ಘಕಾಲದವರೆಗೆ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತುಕೊಳ್ಳುವುದರಿಂದ ಶುಷ್ಕ ಮತ್ತು ಮಂದ ಚರ್ಮಕ್ಕೆ ಕಾರಣವಾಗಬಹುದು. ಹವಾ ನಿಯಂತ್ರಕ ಕೊಠಡಿಯಲ್ಲಿನ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ. ಹಾಗಾಗಿ ನೀವು ಮಂದವಾದ, ಒಣ ಮತ್ತು ಒರಟಾದ ಚರ್ಮವನ್ನು ಹೊಂದುತ್ತೀರಿ.

4. ಅಲರ್ಜಿ:
ನಿಯಮಿತವಾಗಿ ಹವಾನಿಯಂತ್ರಕವನ್ನು ಸ್ವಚ್ಛಗೊಳಿಸದಿದ್ದರೆ ಅಲರ್ಜಿಗಳಿಗೆ ಕಾರಣವಾಗಬಹುದು. ಗಾಳಿಯು ಕೊಠಡಿಯಲ್ಲಿಯೇ ಶೇಖರಣೆಯಾಗಿ ಎಲ್ಲಾ ಧೂಳು ಮತ್ತು ಬ್ಯಾಕ್ಟೀರಿಯಾಗಳು ಇಡೀ ಕೋಣೆಯಲ್ಲಿ ಪ್ರಸಾರವಾಗುತ್ತವೆ ಹಾಗೂ ಚರ್ಮದ ಸೋಂಕು, ಅಲರ್ಜಿಗಳು, ಚರ್ಮ ಕೆಂಪಾಗುವಿಕೆ ಮತ್ತು ತುರಿಕೆಗೆ ಕಾರಣವಾಗಬಹುದು.

5. ಆಯಾಸ:
ಕೆಲಸದ ಸ್ಥಳದಲ್ಲಿ ತೀವ್ರತರವಾದ ಹವಾನಿಯಂತ್ರಕ ಕೊಠಡಿಗಳಲ್ಲಿ ಕೆಲಸ ಮಾಡುವ ಜನರು ಆಯಾಸ, ಉಸಿರಾಟದ ಸಮಸ್ಯೆ ಮತ್ತು ದೀರ್ಘಕಾಲದ ತಲೆನೋವನ್ನು ಅನುಭವಿಸುತ್ತಾರೆ. ಇದರ ಜೊತೆಗೆ ಶೀತ, ಕೆಮ್ಮು ಮತ್ತು ಜ್ವರಕ್ಕೆ ಒಳಗಾಗಬಹುದು.

Comments are closed.