ಕರ್ನಾಟಕ

ಮೈಸೂರಿನಿಂದಲೇ ಸಿದ್ದು ಸ್ಪರ್ಧೆ? ಪ್ರತಾಪ್ ಸಿಂಹ ಪಾಳಯದಲ್ಲಿ ಶುರುವಾಗಿದೆ ಸಣ್ಣ ನಡುಕ

Pinterest LinkedIn Tumblr


ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮುನ್ನಡೆಸಲು ಸಾರಥ್ಯ ವಹಿಸಿರುವ ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ಬಿಜೆಪಿ ಸಂಸದ ಪ್ರತಾಪ್​ ಸಿಂಹ ಎದುರು ಸ್ಪರ್ಧಿಸುವ ಸಾಧ್ಯತೆಯಿದೆ.

ಕಳೆದ ವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಿಂದಲೇ ಸ್ಪರ್ಧಿಸಬೇಕು. ಹೀಗಾಗಿ ಅವರಿಗೆ ಜೆಡಿಎಸ್​ ಬೆಂಬಲಿಸಲು ಒತ್ತಡ ಹಾಕಿ ಎಂದು ಬೆಂಬಲಿಗರು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್​ ಹೈಕಮಾಂಡ್​ ರಾಹುಲ್​ ಗಾಂಧಿ ಅವರೂ ಕೂಡ ಸಿದ್ದರಾಮಯ್ಯ ಅವರಿಗೆ ತವರಿನಿಂದ ಸ್ಪರ್ಧಿಸುವಂತೆ ತಾಖೀತು ಮಾಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಹೈಕಮಾಂಡ್ ಬಯಸುತ್ತಿದ್ದು, ಮೈಸೂರು-ಕೊಡಗು ಕ್ಷೇತ್ರದಿಂದಲೇ ಕಣಕ್ಕಿಳಿಯಬೇಕು ಎಂಬುದು ರಾಹುಲ್​ ಆಶಯವಾಗಿದೆ. ಹೀಗಾಗಿ, ಸಿದ್ದರಾಮಯ್ಯ ಅವರು ಸ್ಪರ್ಧಿಸಲು ಒಲವು ತೋರಿದರೆ ಸಂಸದ ಪ್ರತಾಪ್​ ಸಿಂಹ ಹಾಗೂ ಮಾಜಿ ಸಿಎಂ ನಡುವೆ ತೀವ್ರ ಹಣಾಹಣಿ ಏರ್ಪಡಲಿದೆ.

ಇನ್ನು ಕಾಂಗ್ರೆಸ್​ ಸಭೆಯಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಿಂದ ಕಣಕ್ಕಿಳುವಂತೆ ಅಭಿಪ್ರಾಯಪಟ್ಟಿದ್ಧಾರೆ ಎನ್ನಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಮಾಜಿ ಸಿಎಂ ಸ್ಪರ್ಧೆ ಬಗ್ಗೆ ಗಂಭೀರವಾಗಿ ಚರ್ಚಿಸಲಾಗಿದೆ.

ಇನ್ನು ಇತ್ತೀಚೆಗೆ ಕಾಂಗ್ರೆಸ್​ ಕಾರ್ಯಕಾರಿಣಿ ಸಮಿತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಯ್ಕೆಯಾದರು. ದೆಹಲಿ ಮೂಲಗಳ ಪ್ರಕಾರ ಸಂಪೂರ್ಣ ಮುಂದಿನ ಲೋಕಸಭಾ ಚುನಾವಣೆ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ, ಸಿದ್ದರಾಮಯ್ಯ ಅವರು ಮೈಸೂರಿನಿಂದ ಸ್ಪರ್ಧಿಸಬೇಕಾಗಿರುವ ಅನಿವಾರ್ಯ ಸೃಷ್ಟಿಯಾಗಿದೆ.

‘ಪ್ರತಾಪ್​ ಸಿಂಹ‘ಗೆ ಗೆಲುವು ಕಷ್ಟ: 2014 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪ್​ ಸಿಂಹ ಅವರು 30 ಸಾವಿರಕ್ಕೂ ಹೆಚ್ಚು ಅಂತರ ಮತಗಳಿಂದ ಗೆದ್ದು ನಗೆ ಬೀರಿದ್ದರು. ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಾಪ್​ ಸಿಂಹ ಎದುರು ಕಣಕ್ಕಿಳಿಯುವ ಸಾಧ್ಯತೆಯಿದ್ದು, ಗೆಲುವು ಕಷ್ಟವಾಗಿದೆ.

ಮುಂದಿನ ಬಾರಿಯೂ ಗೆಲ್ಲಬೇಕು ಎಂದು ಪಣತೊಟ್ಟಿರುವ ಸಿಂಹ ಈಗಾಗಲೇ ಚುನಾವಣೆಗೆ ಸಿದ್ದತೆ ನಡೆಸಿಕೊಳ್ಳುತ್ತಿದ್ಧಾರೆ. ಜೆಡಿಎಸ್​ ಕಾಂಗ್ರೆಸ್​ ಮೈತ್ರಿಯಾಗಿ ಸ್ಪರ್ಧಿಸಿದರೆ ಬಿಜೆಪಿ ಸಂಸದನಿಗೆ ಗೆಲ್ಲಲ್ಲು ಬಹಳ ಕಷ್ಟವಾಗಬಹುದು ಎನ್ನಲಾಗಿದೆ. ಆದರೆ, ಮಾಜಿ ಸಿಎಂ ಅವರು ಸ್ಪರ್ಧಿಸಲಿದ್ಧಾರಾ, ಇಲ್ಲವೇ ಎನ್ನುವುದು ಸ್ಪಷ್ಟವಾಗಬೇಕಿದೆ.

Comments are closed.