ಕರಾವಳಿ

ವಸ್ತುಗಳನ್ನೂ ಕ್ಲಿನ್ ಮಾಡುವ ಜೊತೆಗೆ ಉತ್ತಮ ಆರೋಗ್ಯಕ್ಕೂ ಸೈ ಈ ಕಾಯಿ

Pinterest LinkedIn Tumblr

ಅಂಟುವಾಳ ಕಾಯಿಯ ಬಗ್ಗೆ ನಿಜವಾಗಿಯೂ ತುಂಬ ಲಾಭಗಳಿವೆ. ಇದು ಬಹು ಉಪಯೋಗಕ್ಕೆ ಬರುವಂತ ಕಾಯಿಯಾಗಿದೆ.ನಿಮ್ಮ ಆರೋಗ್ಯಕ್ಕೆ ಉತ್ತಮ ಮತ್ತು ಮನೆಯಲ್ಲಿ ಹಲವು ವಸ್ತುಗಳನ್ನೂ ಕ್ಲಿನ್ ಮಾಡಲು ಉಪಯೋಗಿಸಬಹುದು.ಇನ್ನು ಈ ಅಂಟುವಾಳ ಕಾಯಿಯಾ ಯಾವ ಯಾವ ಉಪಯೋಗಕ್ಕೆ ಬರುತ್ತದೆ ಅನ್ನೋದನ್ನು ನೋಡಣ.

ಅಂಟುವಾಳ ಹಲವು ಬಗೆಯಲ್ಲಿ ಉಪಯುಕ್ತ:

1.ಅಂಟುವಾಳ ಕಾಯಿ ಬೀಜದ ತಿರುಳನ್ನು ಶುಂಠಿ, ಬೆಲ್ಲ, ಎಲಚಿ ಬೀಜದೊಂದಿಗೆ ಸೇರಿಸಿ  ಸೆವೆಸಿದರೆ ನಿಮಗೆ ಇರುವ ದಮ್ಮು ರೋಗವನ್ನು ಕಡಮೆ ಮಾಡಿಕೊಳ್ಳಬಹುದು.

2.ಇನ್ನು  ಗಂಡಮಾಲೆ ಇದ್ದಾರೆ ಅಂಟುವಾಳ ಕಾಯಿಯ ಲೇಪದಿಂದ ಗುಣಪಡಿಸಬಹುದು.

3.ಇದರ ಕಾಯಿಯನ್ನು ತೇದು ವಿನಿಗರ್‍ನೊಂದಿಗೆ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಹೇನು ನಾಶ.

4.ಕಾಯಿಯ ನಯಚೂರ್ಣವನ್ನು ನಶ್ಯದ ರೀತಿ ಬಳಸಿದರೆ ಮೂರ್ಛೆರೋಗ ಹತೋಟಿಗೆ ಬರುತ್ತದೆ.

5.ಅಂಟುವಾಳದ ಕಾಯಿಯಲ್ಲಿನ ಸಪೋನಿನ್ ಎಂಬ ರಾಸಾಯನಿಕ ಇದರ ನೊರೆಗೆ ಕಾರಣವಾಗಿದೆ.ಆದ್ದರಿಂದ ಕಾಯನ್ನು ನೀರಿಗೆ ಹಾಕಿ ನೆನೆಸಿ, ಲಭಿಸುವ ನೊರೆಯನ್ನು ಬೆಳ್ಳಿ ಆಭರಣ ವಸ್ತುಗಳನ್ನೂ,ತಲೆಗೂದಲನ್ನೂ, ರೇಷ್ಮೆ ಬಟ್ಟೆಗಳನ್ನೂ ಶುಚಿ ಮಾಡಲು ಸಾಬೂನಿನ ಬದಲು ಬಳಸುತ್ತಾರೆ.

Comments are closed.