ಮನೋರಂಜನೆ

ತಾನು ನಿರ್ಮಿಸಿ ನಟಿಸಿದ್ದ ಚಿತ್ರ ಅಟ್ಟರ್ ಫ್ಲಾಪ್ ಆಗಿ ಸಂಕಷ್ಟಕ್ಕೆ ಸಿಲುಕಿ ಕಳ್ಳತನಕ್ಕೆ ಇಳಿದ ನಟ ! ಈಗ ಪೊಲೀಸರ ಅತಿಥಿ…

Pinterest LinkedIn Tumblr

ಹೈದರಾಬಾದ್: ಟಾಲಿವುಡ್ ನಟ ಮಹೇಶ್ ಹಾಗೂ ಆತನ ಸಹಾಯಕ ವಿಕ್ಕಿ ಬಾಲಾಜಿ ಎಂಬಾತನನ್ನು ಕಳ್ಳತನದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ತೆಲುಗಿನ ನಿವಿರು ಚಿತ್ರವನ್ನು ಮಹೇಶ್ ನಟಿಸಿ ನಿರ್ಮಿಸಿದ್ದರು. ಆದರೆ ಚಿತ್ರ ಫ್ಲಾಪ್ ಆಗಿತ್ತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಹೇಶ್ ಕಳ್ಳತನಕ್ಕೆ ಇಳಿದಿದ್ದರು ಎಂದು ಹೇಳಲಾಗಿದೆ. ಇನ್ನು ಬಂಧಿತರಿಂದ 15 ಲಕ್ಷ ಮೌಲ್ಯದ 50 ತೊಲ ಬಂಗಾರ, 30 ತೊಲ ಬೆಳ್ಳಿ ಹಾಗೂ 3 ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

ಮಹೇಶ್ ಹಗಲಿನಲ್ಲಿ ಕೇಬಲ್ ಆಪರೇಟರ್ ಸೋಗಿನಲ್ಲಿ ಮನೆಗಳನ್ನು ಸುತ್ತಾಡುತ್ತಿದ್ದ, ಇನ್ನು ರಾತ್ರಿ ಆಗುತ್ತಿದ್ದಂತೆ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.

ಇನ್ನು ವಿಕ್ಕಿ ಇದಕ್ಕೂ ಮುನ್ನ ಒಂದು ಬಾರಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ. ಜುಬ್ಲಿ ಹಿಲ್ಸ್ ಪೊಲೀಸರು ಈತನನ್ನು ಬಂಧಿಸಿದ್ದರು. ಜೈಲಿನಿಂದ ಹೊರ ಬಂದ ಮೇಲೂ ಈತ ಕಳ್ಳತನ ಬಿಟ್ಟಿರಲಿಲ್ಲ.

Comments are closed.