ಮಂಗಳೂರು: ಆಗಸ್ಟ್ 25 : ನಗರದಲ್ಲಿ ವೇಗವಾಗಿ ಸಾಗುತ್ತಿದ್ದ ಕಾರೊಂದನ್ನು ಪೊಲೀಸರು ನಿಲ್ಲಿಸಲು ಯತ್ನಿಸಿದಾಗ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ ಇಬ್ಬರು ಪೊಲೀಸರು ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಗಾಯಗೊಂಡ ಇಬ್ಬರು ಪೊಲೀಸರಲ್ಲಿ ಗಜೇದ್ರ ಎಂಬವರಿಗೆ ತೀವ್ರತರವಾದ ಏಟಾಗಿರುವುದರಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ. ಇನೋರ್ವ ಪೊಲೀಸ್ ಕಾನ್ಸ್ಟೆಬಲ್ ನರಪ್ಪ ಎಂಬವರಿಗೂ ಸಣ್ಣಪುಟ್ಟಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಶನಿವಾರ ಮಧ್ಯಾಹ್ನ ವೇಳೆ ನಗರದಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರನ್ನು ನಿಲ್ಲಿಸಲು ಪೊಲೀಸರು ವಿವಿಧ ಸ್ಥಳಗಳಲ್ಲಿ ಪ್ರಯತ್ನಿಸಿದರೂ ಕಾರು ನಿಲ್ಲದೇ ಪರಾರಿಯಾಗಿತ್ತು. ಬಳಿಕ ಪಂಪ್ವೆಲ್, ಜ್ಯೋತಿ ಸರ್ಕಲ್, ಪಿವಿಎಸ್ ಸರ್ಕಲ್, ಲಾಲ್ಭಾಗ್ ಮುಂತಾದ ಸ್ಥಳಗಳಲ್ಲಿ ಬೆನ್ನಟ್ಟಿ ಹೋದ ಪೊಲೀಸರು ಕೊನೆಗೂ ಕಾರನ್ನು ಹಿಡಿಯುವಲ್ಲಿ ಸಪಲರಾದರು.
ಕಾರಿನಲ್ಲಿದ್ದ ಓರ್ವ ಯುವಕ ಹಾಗೂ ಯುವತಿಯನ್ನು ಕದ್ರಿ ಠಾನಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
Comments are closed.