ಆರೋಗ್ಯ

ಶೂನಿಂದ ಕಾಲು ದುರ್ವಾಸನೆ ಬೀರುವುದನ್ನು ತಪ್ಪಿಸಲು ಇಲ್ಲಿದೆ ಮನೆಮದ್ದು…

Pinterest LinkedIn Tumblr

ಶೂನಿಂದ ಕೆಟ್ಟ ವಾಸನೆ ಬೀರುತ್ತಿದ್ದರೆ ನಮ್ಮ ಸಮೀಪ ನಿಂತವರು ಮೂಗು ಮುಚ್ಚಿ, ನಮ್ಮತ್ತ ವಿಚಿತ್ರವಾದ ನೋಟ ಬೀರಿ ದೂರ ಸರಿಯುತ್ತಾರೆ. ಆದರೆ ಕಾಲು ದುರ್ವಾಸನೆ ಬೀರುವುದು ನಾವೇನು ಶುಚಿತ್ವದ ಕಡೆ ಗಮನ ಕೊಡದೆ ಅಲ್ಲ, ಕಾಲನ್ನು ಎಷ್ಟೇ ಉಜ್ಜಿ ತೊಳೆದರೂ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ.

ಕೆಲವರಿಗಂತೂ ಶೂ ಧರಿಸಿದರೆ ದುರ್ವಾಸನೆ ಬೀರುತ್ತದೆ ಎಂದು ಚಪ್ಪಲಿ ಧರಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿರುವುದಿಲ್ಲ.

ಆದರೆ ಕೆಲವೊಂದು ಟ್ರಿಕ್ಸ್‌ಪಾಲಿಸಿದರೆ ಈ ಸಮಸ್ಯೆಯಿಂದ ಪಾರಾಗಬಹುದು. ಅದು ಹೇಗೆ ಎಂದು ನೋಡೋಣ ಬನ್ನಿ:

1. ಟೀ ಬ್ಯಾಗ್‌ಟ್ರಕ್ಸ್‌
ಸಂಜೆ ಮನೆಗೆ ಬಂದಾಗ ಒಂದು ಗ್ಲಾಸ್ ನೀರಿಗೆ ಎರಡು ಟೀ ಬ್ಯಾಗ್‌ಹಾಕಿ ಚೆನ್ನಾಗಿ ಕುದಿಸಿ, ನಂತರ ಆ ನೀರನ್ನು ಬಕೆಟ್‌ಗೆ ಸುರಿದು, ಅದಕ್ಕೆ ಎರಡು ಮಗ್‌ತಣ್ಣೀರು ಸೇರಿಸಿ, ನಂತರ ಕಾಲುಗಳನ್ನು ಅದರಲ್ಲಿ ನೆನೆಸಿ ಇಪ್ಪತ್ತು ನಿಮಿಷ ಇಡಿ. ಈ ರೀತಿ ಒಂದು ವಾರದವರೆಗೆ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

2. ವಿನಿಗರ್‌
ಸ್ನಾನ ಮಾಡುವಾಗ ಕೊನೆಯ ಮಗ್‌ನೀರು ಮೈಮೇಲೆ ಸುರಿಯುವಾಗ ಅದಕ್ಕೆ ಸ್ವಲ್ಪ ವಿನಿಗರ್‌ಸೇರಿಸಿ ಮೈಗೆ ನೀರು ಹಾಕಿ, ನಂತರ ಮೈ ಒರೆಸಿ, ಈ ರೀತಿ ವಾರದವರೆಗೆ ಮಾಡಿದರೆ ಬೆವರಿನ ದುರ್ವಾಸನೆ ಸಮಸ್ಯೆ ಕಾಡುವುದಿಲ್ಲ.

3. ದುರ್ವಾಸನೆ ತಡೆಯುವ ಮದ್ಯ
ಹೌದು ಕಾಲುಗಳನ್ನು ಚೆನ್ನಾಗಿ ತೊಳೆದ ಬಳಿಕ ಕಾಲನ್ನು ಒರೆಸಿ, ನಂತರ ಸ್ವಲ್ಪ ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದಕ್ಕೆ ಮದ್ಯ ಹಾಕಿ ಪಾದಕ್ಕೆ ಉಜ್ಜುವುದರಿಂದ ದುರ್ವಾಸನೆ ತಡೆಯಬಹುದು.

4. ಮೌತ್‌ವಾಶ್‌
ಟೀ ಬ್ಯಾಗ್‌ಟ್ರೀಟ್‌ಮೆಂಟ್‌ರೀತಿಯಲ್ಲೇ ಸ್ವಲ್ಪ ಮೌತ್‌ವಾಶ್‌ತೆಗೆದು ಅದನ್ನು ಹದ ಬಿಸಿ ನೀರಿಗೆ ಹಾಕಿ, ಅದರಲ್ಲಿ ಕಾಲನ್ನು 20 ನಿಮಿಷ ನೆನಸಿ ಇಡುವುದರಿಂದಲೂ ಕಾಲು ಬೆವರಿನ ದುರ್ವಾಸನೆ ಬೀರುವುದನ್ನು ತಡೆಯಬಹುದು.

Comments are closed.