ಕರಾವಳಿ

ಬಂದ್ ವೇಳೆ ಘರ್ಷಣೆ; ಸಹಜ ಸ್ಥಿತಿಯತ್ತ ಉಡುಪಿ ನಗರ; ಪ್ರತ್ಯೇಕ 8 ಪ್ರಕರಣ ದಾಖಲು

Pinterest LinkedIn Tumblr

ಉಡುಪಿ: ಸೋಮವಾರದ ಭಾರತ ಬಂದ್‌ ಸಂದರ್ಭ ಉಡುಪಿಯಲ್ಲಿ ನಡೆದ ಕಾಂಗ್ರೆಸ್‌ – ಬಿಜೆಪಿ ನಡುವಿನ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ಈಗಾಗಲೇ ಉಡುಪಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಸ್ವಯಂ ಪ್ರೇರಿತರಾಗಿ (ಸುಮೋಟೋ) 3 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ೮ ಪ್ರಕರಣ ದಾಖಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಒಟ್ಟು ಮೂವತ್ತಕ್ಕೂ ಅಧಿಕ ಮಂದಿಯ ವಿರುದ್ಧ ಪ್ರಕರಣ ದಾಖಲುಮಾಡಿಕೊಳ್ಳಲಾಗಿದೆ.

ಬಲವಂತದ ಬಂದ್‌ಗೆ ಸಂಬಂಧಿಸಿ 1, ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿ ಒಂದು ಹಾಗೂ ಪರಸ್ಪರ ಹಲ್ಲೆಗೆ ಸಂಬಂಧಿಸಿ 3 ಪ್ರಕರಣಗಳು ಉಡುಪಿ ಮತ್ತು ಮಣಿಪಾಲ ಠಾಣೆಗಳಲ್ಲಿ ದಾಖಲಾಗಿವೆ. ಉಡುಪಿಯಲ್ಲಿ 2 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋ ಜಿಸಲಾಗಿದೆ. ಕುಂದಾ ಪುರಕ್ಕೆ ಒಂದು ಕೆಎಸ್‌ಆರ್‌ಪಿ ತುಕಡಿ ಕಳುಹಿಸಿ ಕೊಡಲಾಗಿದೆ. ಲಾಠಿಚಾರ್ಜ್‌ ಮತ್ತು ಘರ್ಷಣೆ ಕುರಿತಾಗಿ ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಮಂಗಳವಾರ ಕೂಡ ಮಾಹಿತಿ ಪಡೆದುಕೊಂಡಿದ್ದಾರೆ. ಘರ್ಷಣೆ ವೇಳೆ ಗಾಯಳುಗಳಾಗಿರುವವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು ಎರಡು ಪಕ್ಷಗಳ ಇವರು ಆರೋಪಿಗಳಾದ್ದರಿದ ಪೊಲೀಸ್‌ ವಶದಲ್ಲಿದ್ದಾರೆ.

Comments are closed.