ಬೆಂಗಳೂರು: ಸಾಮಾಜಿಕ ಜಾಲತಾಣದಿಂದ ಕೆಲವು ದಿನಗಳಿಂದ ದೂರವೇ ಉಳಿದಿದ್ದ ರಕ್ಷಿತ್ ಶೆಟ್ಟಿ ಮಂಗಳವಾರ ಮತ್ತೆ ಫೇಸ್ ಬುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಹಾಗೂ ರಶ್ಮಿಕಾ ನಡುವಿನ ಬ್ರೇಕಪ್ ಸುದ್ದಿಗಳ ಕುರಿತು ಪ್ರತಿಕ್ರಿಯೆ ನೀಡಿದ್ದರು. ಇದೀಗ ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಕೂಡಾ ರಕ್ಷಿತ್ ಪರ ಟ್ವೀಟರ್ ನಲ್ಲಿ ಬ್ಯಾಟ್ ಬೀಸಿದ್ದಾರೆ.
ರಕ್ಷಿತ್ ಘನತೆ ಮತ್ತು ಪ್ರಬುದ್ಧತೆಯಿಂದ ನಡೆದುಕೊಂಡಿದ್ದೀರಿ. ನಿಮಗೆ ದೇವರು ಒಳ್ಳೆಯದು ಮಾಡಲಿ ಗೆಳೆಯ ಎಂದು ಕಿಚ್ಚ ಶುಭ ಹಾರೈಸಿದ್ದಾರೆ.
ಸೆಲೆಬ್ರಿಟಿಗಳು ತಮ್ಮ ಎಲ್ಲಾ ಭಾವನಾತ್ಮಕ ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕೆಂದಿಲ್ಲ ಅಲ್ಲವೇ? ಪ್ರತಿಯೊಬ್ಬರಿಗೂ ಅವರದ್ದೇ ಆದ ಖಾಸಗಿತನ ಉಳಿಸಿಕೊಳ್ಳುವ ಹಕ್ಕಿದೆ. ಹೀಗಾಗಿ ಈ ಬಗ್ಗೆ ಯಾರೂ ಮತ್ತೆ ಏನನ್ನೂ ಕೇಳಬೇಕಾದ ಅಗತ್ಯವೂ ಇಲ್ಲ ಎಂದು ಸುದೀಪ್ ಟ್ವೀಟ್ ಮಾಡಿ ಸಹಮತ ವ್ಯಕ್ತಪಡಿಸಿದ್ದಾರೆ.
ಎಲ್ಲರೂ ರಶ್ಮಿಕಾ ಕುರಿತು ತಮ್ಮದೇ ಅಭಿಪ್ರಾಯಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈ ವಿಷಯವಾಗಿ ನಾನು ಯಾರನ್ನೂ ದೂಷಿಸುವುದಕ್ಕೆ ಇಷ್ಟಪಡುವುದಿಲ್ಲ. ನಾವು ನೋಡಿದ್ದು ಮತ್ತು ಕೇಳುವುದನ್ನು ಸಹಜವಾಗಿಯೇ ನಂಬುತ್ತೇವೆ. ಆದರೆ ಅವೆಲ್ಲಾ ನಿಜವಾಗಿರಬೇಕೆಂಬ ನಿಯಮವಿಲ್ಲ. ನಾನು ರಶ್ಮಿಕಾ ಅವರನ್ನು ಕಳೆದ ಎರಡು ವರ್ಷಗಳಿಂದ ನೋಡುತ್ತಿದ್ದೇನೆ ಮತ್ತು ಎಲ್ಲರಿಗಿಂತ ಚೆನ್ನಾಗಿ ಅವರನ್ನು ಬಲ್ಲ. ಆಕೆಗೆ ಶಾಂತಿಯಿಂದ ಇರಲು ಬಿಡಿ. ಆಗ ನಿಮಗೇ ನಿಜಾಂಶ ಏನೆದು ತಿಳಿಯುತ್ತದೆ ಎಂದು ರಕ್ಷಿತ್ ನಿನ್ನೆ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದರು.
Comments are closed.