ಹಾವೇರಿ: ವಿದ್ಯಾರ್ಥಿನಿಯನ್ನು ಚುಡಾಯಿಸಿದ ಯುವಕನನ್ನು ನಡು ರಸ್ತೆಯಲ್ಲಿಯೇ ವಿದ್ಯಾರ್ಥಿನಿ ಹಾಗೂ ಆಕೆಯ ಸಂಬಂಧಿಕರು ಚಪ್ಪಲಿಯಿಂದ ಗೂಸಾ ಕೊಟ್ಟ ಘಟನೆ ನಗರದ ಕಾವೇರಿ ಲಾಡ್ಜ್ ಮುಂಭಾಗದಲ್ಲಿ ನಡೆದಿದೆ.
ಹಾನಗಲ್ ತಾಲೂಕಿನ ಗೊಂದಿ ಗ್ರಾಮದ ನಾಗರಾಜ ಗೂಸಾ ತಿಂದ ಯುವಕ. ವಿದ್ಯಾರ್ಥಿನಿಯು ಹಳ್ಳಿಯೊಂದರಿಂದ ನಗರದ ಖಾಸಗಿ ಕಾಲೇಜಿಗೆ ಬಸ್ಸಿನಲ್ಲಿ ಬರುತ್ತಿದ್ದಳು. ನಾಗರಾಜ ಕೂಡಾ ತಮ್ಮ ಗ್ರಾಮದಿಂದ ನಿತ್ಯವೂ ಹಾವೇರಿಗೆ ಕೆಲಸಕ್ಕಾಗಿ ಬರುತ್ತಿದ್ದ. ತನಗೆ ಪರಿಚಿತಳು ಅಂತಾ ನಾಗರಾಜ ಈ ಹಿಂದೆಯೂ ವಿದ್ಯಾರ್ಥಿನಿಯನ್ನು ಚುಡಾಯಿಸಿದ್ದ. ನಾಗರಾಜ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿ ತನ್ನ ಪೋಷಕರಿಗೆ ಈ ವಿಚಾರವನ್ನು ಹೇಳಿದ್ದಳು. ಆಗ ವಿದ್ಯಾರ್ಥಿಯ ಪೋಷಕರು ನಾಗರಾಜಗೆ ಎಚ್ಚರಿಕೆ ನೀಡಿದ್ದರು.
ಇದ್ಯಾವುದನ್ನೂ ಲೆಕ್ಕಿಸದ ನಾಗರಾಜ ಬುಧವಾರ ವಿದ್ಯಾರ್ಥಿನಿಯನ್ನು ಮತ್ತೆ ಚುಡಾಯಿಸಿದ್ದಾನೆ. ತಕ್ಷಣವೇ ಸ್ಥಳಕ್ಕೆ ಬಂದ ವಿದ್ಯಾರ್ಥಿನಿಯ ಪೋಷಕರು ನಾಗರಾಜನನ್ನು ಹಿಡಿದು ಥಳಿಸಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿನಿ ಚಪ್ಪಲಿಯಿಂದ ಹೊಡೆಸಿದ್ದಾಳೆ.
‘ಅಣ್ಣಾ ನಾ ಏನು ತಪ್ಪು ಮಾಡಿಲ್ಲೋ, ದೇವರಾಣೆ ಊರು ಬಿಟ್ಟು ಹೊಕ್ಕೇನಿ, ಬಿಟ್ಟಬಿಡ್ರೋ’ ಅಂತಾ ನಾಗರಾಜ ಕೈಮುಗಿದು ಕೇಳಿಕೊಂಡಿದ್ದಾನೆ. ಆತನ ಮಾತನ್ನು ಲೆಕ್ಕಿಸದ ವಿದ್ಯಾರ್ಥಿನಿ ಸಂಬಂಧಿಕರು, ಮುಖದ ಮೇಲೆ ರಕ್ತ ಬರುವಂತೆ ಹೊಡೆದಿದ್ದಾರೆ. ಬಳಿಕ ವಿದ್ಯಾರ್ಥಿನಿಯ ತಂಟೆಗೆ ಬರದಂತೆ ಎಚ್ಚರಿಕೆ ನೀಡಿದ್ದಾರೆ
Comments are closed.