ಮನೋರಂಜನೆ

ಖ್ಯಾತ ಚಲನಚಿತ್ರ ನಿರ್ಮಾಪಕಿ, ನಿರ್ದೇಶಕಿ ಕಲ್ಪನಾ ಲಜ್ಮಿ ನಿಧನ

Pinterest LinkedIn Tumblr

ಮುಂಬೈ: ಖ್ಯಾತ ಚಲನಚಿತ್ರ ನಿರ್ಮಾಪಕಿ, ನಿರ್ದೇಶಕಿ ಕಲ್ಪನಾ ಲಜ್ಮಿ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.

ದೀರ್ಘಕಾಲದ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಕಲ್ಪನಾ ಲಜ್ಮಿ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕುಟುಂಬದ ಮೂಲಗಳ ಪ್ರಕಾರ ಲಜ್ಮಿ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ ಮತ್ತು ಯಕೃತ್ತಿನ ವೈಫಲ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಅವರ ಸಹೋದರ ದೇವ್ ಲಾಜ್ಮಿ ಮಾಹಿತಿ ನೀಡಿದ್ದು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಲಜ್ಮಿ ಅವರು, “ರುಡಾಲಿ”, “ದಮನ್”, “ಡಾರ್ಮಿಯಾನ್” ಚಿತ್ರಗಳನ್ನು ನಿರ್ದೇಶಿಸಿದ್ದರು. ಅಂತೆಯೇ “ಚಿಂಗಾರಿ” ಲಜ್ಮಿ ನಿರ್ದೇಶಕರಾಗಿದ್ದ ಕೊನೆಯ ಚಿತ್ರವಾಗಿತ್ತು. ಈ ಚಿತ್ರದಲ್ಲಿ ನಟ ಮಿಥುನ್ ಚಕ್ರವರ್ತಿ, ಸುಷ್ಮಿತಾ ಸೇನ್ ಮತ್ತು ಅನುಜ್ ಸಾಹ್ನಿ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದರು. ಲಜ್ಮಿ ಅವರಿಗೆ ನಿಕಟವರ್ತಿಗಳಾಗಿದ್ದ ಕೆಲ ನಟನಟಿಯರು ಟ್ವಿಟರ್‌ನಲ್ಲಿ ತಮ್ಮ ನೆಚ್ಚಿನ ನಿರ್ದೇಶಕಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಸುಮಾರು ಮೂರು ದಶಕಗಳ ಹಿಂದೆ ಲಜ್ಮಿ ಹಿರಿಯ ಚಿತ್ರನಿರ್ದೇಶಕ ಶ್ಯಾಮ್ ಬೆನಗಲ್ ಅವರೊಂದಿಗೆ ಸಹಾಯಕ ನಿರ್ದೇಶಕಿಯಾಗಿ ಸಿನಿ ಜಗತ್ತಿನಲ್ಲಿ ವೃತ್ತಿ ಆರಂಭಿಸಿದರು. ಮೂತ್ರಪಿಂಡದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಲಾಜ್ಮಿ ಅವರಿಗೆ ಅಮೀರ್ ಖಾನ್, ಸಲ್ಮಾನ್ ಖಾನ್, ಕರಣ್ ಜೋಹರ್, ಆಲಿಯಾ ಭಟ್, ಸೋನಿ ರಜ್ದಾನ್ ಮತ್ತು ನೀನಾ ಗುಪ್ತಾ ಸೇರಿದಂತೆ ಹಲವು ಹಿರಿಯ ನಟನಟಿಯರು ಹಣಕಾಸಿನ ಸಹಾಯ ಮಾಡಿದ್ದರು.

Comments are closed.