ರಾಷ್ಟ್ರೀಯ

ಮರಕ್ಕೆ ಕಟ್ಟಿ ಬಾಲಕನಿಗೆ ಥಳಿಸಿ, ಇರುವೆ ಕಚ್ಚಲೆಂದು ಮೈಗೆಲ್ಲ ಸಕ್ಕರೆ

Pinterest LinkedIn Tumblr


ಮೊಬೈಲ್ ಫೋನ್ ಕದ್ದಿದ್ದಕ್ಕೆ ಅಪ್ರಾಪ್ತ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ನಿರ್ದಯವಾಗಿ ಥಳಿಸಿದ ಘಟನೆ ಬಿಹಾರದ ಪಾಟ್ಣಾದಲ್ಲಿ ನಡೆದಿದೆ. ಅಷ್ಟೇ ಅಲ್ಲ ಆತನಿಗೆ ಇರುವೆ ಕಚ್ಚಲೆಂದು ದೇಹಕ್ಕೆಲ್ಲ ಸಕ್ಕರೆ ಮೆತ್ತಿದ್ದಾರೆ. ಬರೋಬ್ಬರಿ ಮೂರು ಗಂಟೆಕಾಲ ನರಕಯಾತನೆ ಅನುಭವಿಸಿದ ಬಾಲಕನನ್ನು ಪೊಲೀಸರು ರಕ್ಷಿಸಿದ್ದು, ಈ ಅಮಾನುಷ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Comments are closed.