ಕರ್ನಾಟಕ

ನಿಗೂಢವಾಗಿರುವ ಲೋಕೋಪಯೋಗಿ ಸಚಿವ ರೇವಣ್ಣ ನಡೆ

Pinterest LinkedIn Tumblr


ಬೆಂಗಳೂರು: ಜೆಡಿಎಸ್​ ಶಾಸಕಾಂಗ ಸಭೆ ಬಳಿಕ ರಾಜಧಾನಿಗೆ ಮರಳಿರುವ ಲೋಕೋಪಯೋಗಿ ಸಚಿವ ಎಚ್​ಡಿ ರೇವಣ್ಣ ಇಂದು ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​ ಮನೆಗೆ ದಿಢೀರ್​ ಭೇಟಿ ನೀಡಿ, ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇಂದು ಬೆಳ್ಳಗ್ಗೆ ಯಾವುದೇ ಮುನ್ಸೂಚನೆ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದ್ದ ಅವರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಇದಾದ ಬಳಿಕ ರೇವಣ್ಣ ಅವರು ಡಿಕೆ ಶಿವಕುಮಾರ್​ ಮನೆಗೆ ಭೇಟಿ ನೀಡಿ ಅವರೊಂದಿಗೂ ಕೂಡ ಮಾತುಕತೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ರೇವಣ್ಣ, ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದರಲ್ಲಿ ವಿಶೇಷತೆ ಇಲ್ಲ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಡಿಕೆಶಿ ಭೇಟಿ ಮಾಡಿರಲಿಲ್ಲ. ಹೀಗಾಗಿ ಇಂದು ಡಿಕೆಶಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ಇದೊಂದು ಸೌಜನ್ಯ ಭೇಟಿ ಅಷ್ಟೇ ಎಂದು ಸಮಾಜಾಷಿಸಿ ನೀಡಿದ್ದಾರೆ.

ಜೆಡಿಎಸ್​ ನಾಯಕರಿಗಿಂತ ಕಾಂಗ್ರೆಸ್​ ಶಾಸಕರು ಹೆಚ್ಚು ಅತೃಪ್ತಿ ಹೊಂದಿದ್ದಾರೆ. ಈ ಬಗ್ಗೆ ಕಾಂಗ್ರೆಸ್​ ಹಿರಿಯ ನಾಯಕರಿಗೂ ದೂರು ನೀಡಲಾಗಿದ್ದು, ಅವರ ನಡೆಗೆ ಕುಮಾರಸ್ವಾಮಿ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ ಯಾವ ಅಸಮಾಧಾನವೂ ಇಲ್ಲ, ಸರ್ಕಾರ ಸುಭದ್ರವಾಗಿದೆ. ರಾಜಕೀಯ ಎಲ್ಲ ಸಿಎಂ ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ ಎಂದರು.

ಮೈತ್ರಿ ಸರ್ಕಾರದಲ್ಲಿ ಅಸಮಾಧಾನಗೊಂಡಿರುವ ಕಾಂಗ್ರೆಸ್​ ಶಾಸಕರನ್ನು ಸೆಳೆಯಲು ಬಿಜೆಪಿ​ ನಾಯಕರು ಮುಂದಾಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್​ ನಾಯಕರು ಎಚ್ಚರ ವಹಿಸಬೇಕು ಎಂದು ಜೆಡಿಎಸ್​ ನಾಯಕರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್​ ಎಲ್ಲಾ ಶಾಸಕರೊಂದಿಗೆ ಸಭೆ ನಡೆಸಲು ಮುಂದಾಗಿದೆ.

ಇದರ ನಡುವೆ ರೇವಣ್ಣ ಅವರು ಕಾಂಗ್ರೆಸ್​ನ ನಾಯಕರನ್ನು ಭೇಟಿ ಮಾಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Comments are closed.