ಕರಾವಳಿ

ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಈ ಎಲೆಯಲ್ಲಿದೆ.

Pinterest LinkedIn Tumblr

ಹೌದು ಹಳ್ಳಿಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ದೊಡ್ಡಪತ್ರೆ ಗಿಡ ಕಂಡು ಬರುತ್ತದೆ, ಇದರ ಔಷಧೀಯ ಗುಣ ತಿಳಿದವರು ನಗರ ಪ್ರದೇಶದಲ್ಲಿ ಇರುವ ಅಲ್ಪ ಜಾಗದಲ್ಲಿ ಒಂದು ಹೂ ಕುಂಡದಲ್ಲಿ ಈ ಗಿಡವನ್ನು ಬೆಳೆಸುತ್ತಾರೆ. ಇದನ್ನು ಇಂಗ್ಲಿಷ್‌ನಲ್ಲಿ Indian Borage ಎಂದು ಕರೆಯುತ್ತಾರೆ. ಈ ಗಿಡ ಮನೆಯಲ್ಲಿದ್ದರೆ ಈ ಕೆಳಗಿನ ಔ‍ಷಧೀಯ ಗುಣಗಳನ್ನು ಪಡೆಯಬಹುದು.

ದೊಡ್ಡಪತ್ರೆ ಎಲೆಯನ್ನು ಬಿಸಿ ಮಾಡಿ, ಅದರ ರಸ ಕುಡಿದರೆ ಕೆಮ್ಮು, ಶೀತ, ಗಂಟಲು ನೋವು ಇವುಗಳ ನಿವಾರಣೆಯಾಗವುದು. ಅಜೀರ್ಣ ಸಮಸ್ಯೆ ನಿವಾರಣೆಗೆ ಮನೆಮದ್ದಾಗಿ ಬಳಸಬಹುದು. ಇದರ ರಸ ಕುಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು. ಹರಿಗೆಯ ನಂತರ ಎದೆಹಾಲು ಹೆಚ್ಚಲು ಇದನ್ನು ನೀಡುತ್ತಾರೆ. ಮೈಯೆಲ್ಲಿ ಅಲರ್ಜಿ ಕಂಡು ಬಂದರೆ ಈ ಎಲೆಯಿಂದ ಉಜ್ಜಿದರೆ ಸಾಕು, ಮೈಯಲ್ಲಿ ಎದ್ದ ಬೊಬ್ಬೆ ಮಾಯವಾಗುವುದು.

ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಇದರಲ್ಲಿದೆ. ಸಂಧಿನೋವು ನಿವಾರಣೆಗೆ ಮನೆಮದ್ದಾಗಿ ಬಳಸುತ್ತಾರೆ, ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇದರಲ್ಲಿ ವಿಟಮಿನ್‌ ಎ ಹಾಗೂ ಸಿ ಅಂಶವಿದೆ. ಒಮೆಗಾ 6 ಕೊಬ್ಬಿನಂಶವಿದೆ.

ಅಡ್ಡಪರಿಣಾಮ:
ಸೂಕ್ಷ್ಮ ತ್ವಚೆಯವರಿಗೆ ಅಲರ್ಜಿ ಕಂಡು ಬರುವುದು. ಹೆರಿಗೆಯ ನಂತರ ಎದೆ ಹಾಲು ಹೆಚ್ಚಿಸಲು ಸಹಾಯ ಮಾಡುವ ಎಲೆಯನ್ನು ಗರ್ಭಿಣಿಯರು ಬಳಸಬಾರದು.

Comments are closed.