ಅಂತರಾಷ್ಟ್ರೀಯ

16 ವರ್ಷಕ್ಕೆ ನಾನು ಅತ್ಯಾಚಾರಕ್ಕೆ ಒಳಗಾಗಿದ್ದೆ; ಅಮೆರಿಕದ ಪ್ರಖ್ಯಾತ ಟಿವಿ ಕಾರ್ಯಕ್ರಮದ ನಿರೂಪಕಿ ಪದ್ಮಲಕ್ಷ್ಮಿ

Pinterest LinkedIn Tumblr


ನ್ಯೂ ಯರ್ಕ್​: 16 ವರ್ಷವಿದ್ದಾಗಲೇ ನನ್ನ ಮೇಲೆ ಅತ್ಯಾಚಾರ ನಡೆದಿತ್ತು. ಆದರೆ ಈ ಬಗ್ಗೆ ಕುಟುಂಬ, ಸ್ನೇಹಿತರ ಮುಂದೆ ಹೇಳಲು ನನಗೆ ಧೈರ್ಯ ಇರಲಿಲ್ಲ ಎಂದು ಅಮೆರಿಕದ ಪ್ರಖ್ಯಾತ ಟಿವಿ ಕಾರ್ಯಕ್ರಮದ ನಿರೂಪಕಿ ‘ಪದ್ಮಲಕ್ಷ್ಮೀ’ ‘ನ್ಯೂ ಯಾರ್ಕ್​ ಟೈಮ್ಸ್​’ ಗೆ ತಿಳಿಸಿದ್ದಾರೆ,

ಅಲ್ಲಿನ ಸುಪ್ರೀಂ ಕೋರ್ಟ್​ಗೆ ಬ್ರೆಟ್​ ಕವಾನಾಗ್​ ಅವರನ್ನು ನ್ಯಾಯಾಧೀಶರಾಗಿ ನೇಮಕ ಮಾಡುತ್ತಿದ್ದಂತೆ, ಕವಾನಾಗ್​ ಮೇಲೆ ಇಬ್ಬರು ಮಹಿಳೆಯರು ಲೈಗಿಂಕ ಕಿರುಕುಳ ಆರೋಪ ಮಾಡಿದ್ದಾರೆ. ನ್ಯಾಯಾಧೀಶರ ರಕ್ಷಣೆಗೆ ಟ್ರಂಪ್​ ಮುಂದಾಗಿದ್ದಾರೆ. ಈ ಬೆಳವಣಿಗೆ ಪ್ರೇರಣೆಯಾಗಿ ಈ ಲೇಖನ ಪ್ರಕಟಿಸಲಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

ಕವನಾಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಫೋರ್ಡ್ ಎಂಬ ಮಹಿಳೆ​ ಆರೋಪಿಸಿದ್ದರು. ಫೋರ್ಡ್​ ಪರ ಪದ್ಮಲಕ್ಷ್ಮೀ ಧ್ವನಿ ಎತ್ತಿತ್ತು. ತಮ್ಮ ಟ್ವೀಟ್​ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.

“ಕವನಾಗ ವಿರುದ್ಧ ಪೋರ್ಡ್​ ಹೇಳುತ್ತಿರುವುದರಲ್ಲಿ ಸತ್ಯವಿದೆ ಎಂದರೆ, ಆಕೆ ಹಲವು ವರ್ಷಗಳ ಹಿಂದೆಯೇ ಪೊಲೀಸರಿಗೆ ದೂರು ದಾಖಲು ಮಾಡಬಹುದಾಗಿತ್ತು ಎಂದು ಟ್ರಂಪ್​ ಟ್ವೀಟ್​ ಮಾಡಿದ್ದಾರೆ. ಆದರೆ ನನಗೆ ಅರ್ಧವಾಗುತ್ತದೆ. ಆಕೆ ಏಕೆ ಈ ರೀತಿ ವಿಷಯವನ್ನು ಇಷ್ಟು ವರ್ಷ ಮುಚ್ಚಿಟ್ಟಿದ್ದಳು ಎಂದು. ಕಾರಣ ಇದನ್ನೇ ನಾನು ಮಾಡಿದ್ದೆ” ಎಂದು ಬರೆದುಕೊಂಡಿದ್ದಾರೆ.

1980ರ ಹೊಸ ವರ್ಷದ ಸಂಜೆ ನಾನು 23 ವರ್ಷದ ಆತನನ್ನು ಭೇಟಿಯಾಗಿದ್ದೆ. ಒಂದೆರಡು ಹೊಸ ವರ್ಷದ ಪಾರ್ಟಿಯಲ್ಲಿ ನಾವು ಭಾಗಿಯಾಗಿದ್ದೇವು. ಬಳಿಕ ನಾನು ಆತನ ಅಪಾರ್ಟ್​ಮೆಂಟ್​ಗೆ ಹೋಗಿದ್ದೆ. ಆಗ ಮಲಗಿದ್ದ ನನ್ನ ಮೇಲೆ ಆತನ ಕೈಗಳು ಬಂದಾಗ ನಾನು ಕಿರುಚಿದೆ, ಪ್ರತಿಭಟಿಸಿದೆ. ಆದರೂ ನನ್ನ ಮೇಲೆ ಅತ್ಯಾಚಾರ ನಡೆದು ಹೋಯಿತು. ಭಯದಿಂದ ಈ ವಿಷಯದಿಂದ ನನ್ನ ತಾಯಿ, ಸ್ನೇಹಿತರು, ಪೊಲೀಸರ ಬಳಿ ಹೇಳಲಿಲ್ಲ.

ನನಗೆ ಅರ್ಥವಾಗುತ್ತದೆ ಮಹಿಳೆಯರು ಯಾಕೆ ಈ ವಿಷಯದ ಬಗ್ಗೆ ಬಾಯಿಬಿಡುವುದಿಲ್ಲ ಎಂದು. 31 ವರ್ಷದ ಬಳಿಕ ಈ ವಿಷಯವನ್ನು ತಿಳಿಸಿ ನನಗೆ ಆಗಬೇಕಾಗಿರುವುದು ಏನು ಇಲ್ಲ. ಅವರ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಚೆನ್ನೈ ಮೂಲದ ಪದ್ಮ ಅಡುಗೆ ಪುಸ್ತಕಗಳ ಲೇಖಕಿ ಜೊತೆಗೆ ಮಾಡೆಲಿಂಗ್​, ಟಿವಿ, ನಟನೆ ಮೂಲಕ ಹೆಸರು ಮಾಡಿದ್ದಾರೆ. ಅರೆಬೆತ್ತಲೆ ಫೋಟೋಗಳ ಮೂಲಕ ಹೆಚ್ಚು ಸದ್ದು ಮಾಡಿದ ಈ ನಟಿ ‘ಪ್ಲೇ ಬಾಯ್​ ಬಾಯ್’​ ಮ್ಯಾಗಜೀನ್​ನ ಮುಖಪುಟವನ್ನು ಅಲಂಕರಿಸಿದ್ದರು. ಅಮೆರಿಕದ ‘ಟಾಪ್​ ಚೇಫ್’​ ಕಾರ್ಯಕ್ರಮದ ನಿರೂಪಕಿಯಾಗಿ ಇವರು ಖ್ಯಾತಿ ಹೊಂದಿದ್ದಾರೆ.

Comments are closed.