ಮುಂಬೈ: ಬಾಲಿವುಡ್ ಜನಪ್ರಿಯ ನಟ ನಾನಾ ಪಾಟೇಕರ್ ಬಗ್ಗೆ ನಟಿ ತನುಶ್ರೀ ದತ್ತಾ ಶಾಕಿಂಗ್ ವಿವರವನ್ನು ಬಹಿರಂಗಗೊಳಿಸುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ. ಅರೇ ನಾನಾ ಕುರಿತು ತನುಶ್ರೀ ಮಾಡಿರುವ ಆರೋಪವೇನು..ಆಕೆ ಹೇಳೋದೇನು ಗೊತ್ತಾ…
ಸಂದರ್ಶನದಲ್ಲಿ ತನುಶ್ರೀ ಹೇಳಿದ್ದಿಷ್ಟು:
ಝೂಮ್ ನಡೆಸಿದ ವಿಡಿಯೋ ಸಂದರ್ಶನದಲ್ಲಿ ಮಾತನಾಡಿರುವ ತನುಶ್ರೀ, ನಾನಾ ಪಾಟೇಕರ್ ಸಿನಿಮಾವೊಂದರ ಡ್ಯಾನ್ಸ್ ಚಿತ್ರೀಕರಣದ ವೇಳೆ ಲೈಂಗಿಕ ಕಿರುಕುಳ ಕೊಟ್ಟಿದ್ದರು. ಮಹಿಳೆಯರ ಜೊತೆ ನಾನಾ ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ಇಡೀ ಬಾಲಿವುಡ್ ಗೆ ಗೊತ್ತು. ಸೆಟ್ ನಲ್ಲಿಯೇ ನಟಿಯರಿಗೆ ನಾನಾ ಪಾಟೇಕರ್ ಹೊಡೆಯುವ ಕೆಟ್ಟ ಚಾಳಿ ಮತ್ತು ಕಿರುಕುಳದ ಬಗ್ಗೆ ಪ್ರತಿಯೊಬ್ಬರು ಮಾತನಾಡುತ್ತಾರೆ.
ನಾನಾ ಪಾಟೇಕರ್ ಸಿನಿಮಾ ನಟಿಯರ ಜೊತೆಗಿನ ನಡವಳಿಕೆ ಬಗ್ಗೆ ಬಾಲಿವುಡ್ ಗೆ ಚೆನ್ನಾಗಿ ಗೊತ್ತಿದೆ. ಆದರೆ ಯಾವುದೇ ಮಾಧ್ಯಮಗಳು ಈ ಬಗ್ಗೆ ಬರೆಯುವ ಧೈರ್ಯ ತೋರಿಲ್ಲ ಎಂದು ತನುಶ್ರೀ ಆರೋಪಿಸಿದ್ದಾರೆ.
2008ರಲ್ಲಿ ನಡೆದ ಘಟನೆಯೊಂದನ್ನು ಮೆಲುಕು ಹಾಕಿದ ನಟಿ ತನುಶ್ರೀ, ಹಾರ್ನ್ ಓಕೆ ಪ್ಲೀಸ್ ಬಾಲಿವುಡ್ ಸಿನಿಮಾ ಚಿತ್ರೀಕರಣದ ಮೊಲದ ದಿನವೇ ನಾನಾ ಪಾಟೇಕರ್ ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ನಿರ್ಮಾಪಕರು ಮತ್ತು ನಿರ್ದೇಶಕರ ಬಳಿ ದೂರಿದ್ದೆ, ಆದರೆ ಅದಕ್ಕೆ ಅವರು ನೀನು ನಾನಾ ಪಾಟೇಕರ್ ಬೇಡಿಕೆ ಬಗ್ಗೆ ಕೇಳು ಎಂದು ಹೇಳಿರುವುದಾಗಿ ದೂರಿದ್ದಾರೆ.
Comments are closed.