ಕೊಟ್ಟಾಯಂ: ಕ್ರಿಶ್ಚಿಯನ್ ಸಮುದಾಯ ಕೂಡ ಕಮಲದ ಕಡೆ ಒಲವು ತೋರುತ್ತಿದೆ ಎಂಬ ಸಂಕೇತವೆಂಬಂತೆ ಕೇರಳದ ಮೂವರು ಪಾದ್ರಿಗಳು ಬಿಜೆಪಿಗೆ ಸೇರ್ಪಡೆಸಾಗುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಯಾಕೋಬಾ ಸಿರಿಯನ್ ಚರ್ಚ್ ಮತ್ತು ಡೀಕನ್ ಚರ್ಚ್ ಪಾದಿಗ್ರಳು ಶನಿವಾರ ಕೊಟ್ಟಾಯಂನಲ್ಲಿ ಕಮಲದ ಜತೆ ಕೈ ಜೋಡಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಪಿ ಎಸ್ ಶ್ರೀಧರನ್ ಪಿಳ್ಳೈ ಉಪಸ್ಥಿತಿಯಲ್ಲಿ ಫಾದರ್ ಜೀವರ್ಗೀಸ್ ಕಿಳಕ್ಕೆಡತ್, ಫಾದರ್ ಥಾಮಸ್ ಕುಶತುಂಗಲ್, ಡೀಕನ್ ಆಂಡ್ರೂಸ್ ಮಂಗಲತ್ ಬಿಜೆಪಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾಕೋಬಾ ಸಿರಿಯನ್ ಆರ್ಥೋಡಾಕ್ಸ್ ಚರ್ಚ್ನ ಮುಂದಿನ ಕ್ಯಾಥೋಲಿಕೋಸ್ ಎಂದು ಪರಿಗಣಿತವಾಗಿರುವ ಯಾಕೋಬಾ ಸಿರಿಯನ್ ಚರ್ಚ್ ಬಿಷಪ್ ಥಾಮಸ್ ಮಾರ್ ತಿಮೋಥಿಯೋಸ್, ಬಿಜೆಪಿ ಸೇರಲು ಈ ಮೂವರಿಗೆ ಅನುಮತಿ ನೀಡಿರುವುದು ಇಲ್ಲಿ ಗಮನಾರ್ಹ. ತಮ್ಮ ಫಾದರ್ಗಳ ರಾಜಕೀಯ ಸ್ವಾತಂತ್ರ್ಯಕ್ಕೆ ಯಾಕೋಬಾ ಚರ್ಚ್ ಯಾವುದೇ ರೀತಿಯಲ್ಲಿ ನಿರ್ಬಂಧ ಹೇರುವುದಿಲ್ಲ. ಅವರು ತಮ್ಮ ನಿಲುವು ತೆಗೆದುಕೊಳ್ಳಲು ಮುಕ್ತರು ಎಂದವರು ಹೇಳಿದ್ದಾರೆ.
ಹಿಂದುತ್ವ ಸಿದ್ಧಾಂತದ ಮೇಲೆ ನಿಂತಿರುವ ಬಿಜೆಪಿಗೆ, ಕ್ರಿಶ್ಚಿಯನ್ ಧರ್ಮಾಧಿಕಾರಿಗಳ ಸೇರ್ಪಡೆ ಹೊಸ ಸಂಚಲನ ಮೂಡಿಸಿದ್ದು, ಇದು ಆರಂಭವಷ್ಚೇ ನೂರಾರು ಸಂಖ್ಯೆಯಲ್ಲಿ ಫಾದರ್ಗಳು ಕಮಲಕ್ಕೆ ಸೇರಲಿದ್ದಾರೆ ಎಂದು ಫಾದರ್ ಥಾಮಸ್ ಕುಶತುಂಗಲ್ ಹೇಳಿದ್ದಾರೆ.
Comments are closed.