ಕರ್ನಾಟಕ

ಮಹದಾಯಿ ವಿವಾದ: ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದ ಡಿಕೆಶಿ

Pinterest LinkedIn Tumblr


ಬೆಳಗಾವಿ: ಮಹದಾಯಿ ನ್ಯಾಯಾಧೀಕರಣ ತೀರ್ಪಿನಿಂದ ದೊಡ್ಡ ಅನ್ಯಾಯವಾಗಿದೆ. ತೀರ್ಪಿನಿಂದ ಅತಿ ಸಂತೋಷ ಪಡಲು ಸಾಧ್ಯವಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಜಿಲ್ಲೆಯ ಕಣಕುಂಬಿಯಲ್ಲಿ ಪರಿಶೀಲನೆ ನಡೆಸಿದ ನಂತರ ಸಚಿವರು ಸುದ್ದಿಗಾರರ ಜತೆ ಮಾತನಾಡಿದರು.

ನಾವೇನು ಮಹದಾಯಿಯಲ್ಲಿ 199 ಟಿಎಂಸಿ ನೀರು ಇದೆ ಅಂತ ವಾದ ಮಾಡಿದ್ದೇವೆ. 188 ಟಿಎಂಸಿ ನೀರು ಉತ್ಪಾದನೆ ಆಗುತ್ತಿದೆ ಎಂದು ನ್ಯಾಯಾಧೀಕರಣ ಒಪ್ಪಿಕೊಂಡಿದೆ. 140 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ರಾಜ್ಯಕ್ಕೆ 13.5 ಟಿಎಂಸಿ ನೀರು ಸಿಕ್ಕಿದೆ ಎಂದರು.

ಕಳಸಾ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ್ದೇ‌ನೆ. ನ್ಯಾಯಾಧೀಕರಣ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೇಲ್ಮನವಿ ಸಲ್ಲಿಕೆ ವಿಚಾರ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. ಈಗ ಸಿಕ್ಕಿರೋ ನೀರು ಶೀಘ್ರದಲ್ಲಿ ಉಪಯೋಗಕ್ಕೆ ಸಿದ್ದತೆ ಮಾಡಲಾಗುವುದು. ಕೇಂದ್ರ ಸರ್ಕಾರ ಗೆಜೆಟ್ ನೋಟಿಫೆಕೆಷನ್ ಹೊರಡಿಸಬೇಕು. ಈಗಾಗಲೇ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಕಳಸಾ ನಾಲಾ ಕೆಲಸ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದರು.

ಕಳಸಾ ಬಂಡೂರಿ ಯೋಜನೆ ಜಾರಿಗೆ 731 ಹೆಕ್ಟೇರ್ ಪ್ರದೇಶ ಮುಳುಗಡೆಯಾಗಲಿದೆ. ಅರಣ್ಯ ಭೂಮಿ ಸೇರಿ 192 ಹೆಕ್ಟೇರ್ ಖಾಸಗಿ ಜಮೀನು ವಶಪಡಿಸಿಕೊಳ್ಳಲು ಸಿದ್ದತೆ. ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ನಮ್ಮ ಹಕ್ಕು ಪಡೆದುಕೊಳ್ಳಲು ಸಿದ್ಧ. ಸುಪ್ರೀಂ ಕೋರ್ಟ್ ಸ್ಟೇ ತೆರವು, ಗೆಜಟ್ ನೋಟಿಫಿಕೇಷನ್ ನಂತರ ಕೆಲಸ ಆರಂಭಿಸಲಾಗುವುದು ಎಂದರು.

ಈವರೆಗೆ 250 ಕೋಟಿ ವೆಚ್ಚದಲ್ಲಿ ಕೆಲಸ ಆಗಿದೆ. ಎಷ್ಟೆ ಹಣ ಖರ್ಚು ಆದ್ರು ಸರ್ಕಾರ ಮಾಡಲು ಸಿದ್ಧ. ಕಳಸಾ ಬಂಡೂರಿ ಯೋಜನೆಯಿಂದ ಪರಿಸರಕ್ಕೆ ಹಾನಿ ಆಗಲ್ಲ. ಸರ್ವ ಪಕ್ಷ ಸಭೆ ಕರೆದು ಯೋಜನೆ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದರು.

Comments are closed.