ಕರ್ನಾಟಕ

ಹೈಡ್ರಾಮ ನಡುವೆ ಬಿಬಿಎಂಪಿ ಮೇಯರ್ ಆಗಿ ಗಂಗಾಂಬಿಕೆ ಮಲ್ಲಿಕಾರ್ಜುನ, ಉಪಮೇಯರ್ ಆಗಿ ಆಯ್ಕೆ

Pinterest LinkedIn Tumblr

ಬೆಂಗಳೂರು: ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆ ನಡೆಯುತ್ತಿದ್ದ ಸ್ಥಳ ಅಕ್ಷರಸಹ ರಣರಂಗವಾಗಿದ್ದು, ಕುರ್ಚಿಗಾಗಿ ಕಾರ್ಪೊರೇಟರ್ ಗಳು ಕಿತ್ತಾಡಿ, ಸದನದ ಘನತೆಗೆ ಧಕ್ಕೆ ಉಂಟುಮಾಡಿದ್ದಾರೆ.

259 ವಾರ್ಡ್ ಗಳಿರುವ ಬಿಬಿಎಂಪಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಸೆ.28 ರಂದು ಶಾಂತಿಯುತವಾಗಿ ನಡೆಯಬೇಕಿತ್ತು. ಆದರೆ ಬಿಬಿಎಂಪಿ ಮೇಯರ್ ಚುನಾವಣೆಯಲ್ಲೂ ಕಾರ್ಪೊರೇಟರ್ ಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಯತ್ನ ನಡೆದಿದ್ದು ಚುನಾವಣೆಯಲ್ಲಿ ಗದ್ದಲ ಉಂಟಾಗುವಂತೆ ಮಾಡಿತ್ತು.

ಬಿಜೆಪಿ ಜೊತೆ ಇದ್ದು ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್ ಜತೆ ಕುಳಿತ ಪಕ್ಷೇತರ ಅಭ್ಯರ್ಥಿ ಆನಂದ್ ವಿಚಾರವಾಗಿ ಕಿತ್ತಾಟ ಪ್ರಾರಂಭಗೊಂಡು, ಬಿಜೆಪಿ ಸದಸ್ಯರು ಗದ್ದಲ ಉಂಟುಮಾಡಿದರು. ಅಷ್ಟೇ ಅಲ್ಲದೇ ಜೆಡಿಎಸ್ ನ ಕಾರ್ಪೊರೇಟರ್ ಮಂಜುಳಾ ಅವರಿಗೆ ದಿಗ್ಬಂಧನ ಹಾಕಿ, ಕೂಡಿ ಹಾಕಿದ್ದ ಘಟನೆಯೂ ನಡೆದಿದೆ.

ಸಾಕಷ್ಟು ಹೈಡ್ರಾಮ, ಕಿತ್ತಾಟ, ಗದ್ದಲದ ನಡುವೆ ಪ್ರದೇಶಿಕ ಆಯುಕ್ತ ಶಿವಯೋಗಿ ಕಳಸದ್ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು. ಆದರೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಮೇಯರ್ ಉಪಮೇಯರ್ ಸ್ಥಾನ ಒಲಿದಿದ್ದು, ಗಂಗಾಂಬಿಕೆ ಮಲ್ಲಿಕಾರ್ಜುನ ಮೇಯರ್ ಆಗಿ ಆಯ್ಕೆಗೊಂಡರೆ, ಉಪಮೇಯರ್ ಆಗಿ ರಮೀಳಾ ಉಮಾಶಂಕರ್ ಆಯ್ಕೆಗೊಂಡಿದ್ದಾರೆ. 8 ಪಕ್ಷೇತರ ಬೆಂಬಲ ಸೇರಿ ಕಾಂಗ್ರೆಸ್-ಜೆಡಿಎಸ್ ಒಟ್ಟು 136 ಸದಸ್ಯರ ಬೆಂಬಲ ಹೊಂದಲಿದ್ದು ಮ್ಯಾಜಿಕ್ ನಂಬರ್ 130 ಕ್ಕಿಂತ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್-ಜೆಡಿಎಸ್ ಪಡೆದಿವೆ.

Comments are closed.