ರಾಷ್ಟ್ರೀಯ

ಐಟಿ ಕಂಪನಿಯ ಟ್ರಾವೆಲ್ ಡೆಸ್ಕ್‌ ವಿಭಾಗದ ಅತೀಶ್ ದಂಪತಿ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನ: ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

Pinterest LinkedIn Tumblr


ಕೋಲ್ಕತ್ತಾ: ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬವೊಂದು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಪ್ರಕರಣ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

ಐಟಿ ಕಂಪನಿಯ ಟ್ರಾವೆಲ್ ಡೆಸ್ಕ್‌ ವಿಭಾಗದಲ್ಲಿದ್ದ ಅತೀಶ್ ಎಂಬಾತ ಪತ್ನಿ ಮತ್ತು 6 ವರ್ಷದ ಮಗಳ ಜತೆ ಆತ್ಮಹತ್ಯೆ ಯತ್ನಿಸಿದ್ದಾನೆ. ಮನೆಯೊಳಗೆ ಲಾಕ್‌ ಮಾಡಿಕೊಂಡು ರಾತ್ರಿ ಸುಮಾರು 2 ಗಂಟೆಗೆ ಕೈ ಮತ್ತು ಗಂಟಲು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆದರೆ ರಕ್ತಸಾವ್ರ ಉಂಟಾಗಿದ್ದು, ಮೂವರೂ ನಿತ್ರಾಣಗೊಂಡಿದ್ದಾರೆ. ನಂತರ ಅತೀಶ್ ಪತ್ನಿ ಆವರ ಸಹೋದರನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಮಗಳನ್ನು ಉಳಿಸುವಂತೆ ಕೋರಿಕೊಂಡಿದ್ದಾರೆ. ತಕ್ಷಣ ಆಗಮಿಸಿದ ಆಕೆಯ ಸಹೋದರ, ಮೂವರನ್ನೂ ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ ಅತೀಶ್ ಮೊದಲು ಮಗುವನ್ನು ಹತ್ಯೆಗೈಯಲು ಯತ್ನಿಸಿದ್ದಾನೆ. ನಂತರ ಪತ್ನಿಯ ಕೈ ಮತ್ತು ಗಂಟಲು ಕುಯ್ದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.

ಅತೀಶ್ ಮಗಳ ಸ್ಥಿತಿ ಗಂಭೀರವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments are closed.