ಕರ್ನಾಟಕ

ಮುನಿಸಿಕೊಂಡು ತಂದೆಯನ್ನು 5 ದಿನದಿಂದ ಭೇಟಿಯಾಗದ ಕುಮಾರಸ್ವಾಮಿ!

Pinterest LinkedIn Tumblr


ಬೆಂಗಳೂರು: ಗೌಡರ ಕುಟುಂಬದಲ್ಲಿ ಮತ್ತೆ ಕಲಹ ಆರಂಭವಾಗಿದೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್​ನಿಂದ ಪಕ್ಷದ ವರಿಷ್ಠರಾದ ದೇವೇಗೌಡರು ತಮ್ಮ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಮಗ ಎಚ್.ಡಿ.ಕುಮಾರಸ್ವಾಮಿ ಅವರು ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅ.4ರಂದು ವಿಧಾನ ಪರಿಷತ್​ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೈತ್ರಿ ಸರ್ಕಾರದ ಒಪ್ಪಂದದಂತೆ ಕಾಂಗ್ರೆಸ್​ಗೆ ಎರಡು ಸ್ಥಾನ ಹಾಗೂ ಜೆಡಿಎಸ್​ಗೆ ಒಂದು ಸ್ಥಾನ ಬಿಟ್ಟುಕೊಡಲಾಗಿದೆ. ಈ ಒಂದು ಸ್ಥಾನಕ್ಕೆ ಕುಮಾರಸ್ವಾಮಿ ಅವರು ನವಲಗುಂದದ ಮಾಜಿ ಶಾಸಕ ಎನ್​.ಎಚ್. ಕೋನರೆಡ್ಡಿ ಅವರಿಗೆ ನೀಡುವ ಮೂಲಕ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಲು ಬಯಸಿದ್ದರು. ಆದರೆ, ದೇವೇಗೌಡರು ಯಾರ ಮಾತಿಗೂ ಮಣೆ ಹಾಕದೆ, ಅಷ್ಟೆನೂ ಪ್ರಭಾವಿ, ಅನುಭವವಿಲ್ಲದ ರಮೇಶ್​ಗೌಡ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಇದರಿಂದ ದೇವೇಗೌಡ ಅವರ ಮೇಲೆ ಕುಮಾರಸ್ವಾಮಿ ಅವರು ಮುನಿಸಿಕೊಂಡಿದ್ದಾರಂತೆ.

ಆಡಳಿಯ ವಿಚಾರಗಳನ್ನು ಚರ್ಚೆ ಮಾಡಲು, ಸಲಹೆ ಕೇಳಲು ಪ್ರತಿದಿನ ದೇವೇಗೌಡ ಅವರನ್ನು ಸಂಪರ್ಕಿಸುತ್ತಿದ್ದ ಕುಮಾರಸ್ವಾಮಿ ಅವರು ಈ ಘಟನೆ ನಡೆದ ನಂತರದಿಂದ ಗೌಡರನ್ನು ಭೇಟಿ ಆಗಿಲ್ಲವಂತೆ. ಅಲ್ಲದೇ, ದೂರವಾಣಿ ಕರೆ ಮಾಡಿ ಕೂಡ ಮಾತನಾಡಿಲ್ಲವಂತೆ.

ಪರಿಷತ್​ಗೆ ನೀವೇ ಅಭ್ಯರ್ಥಿ, ನಾಮಪತ್ರ ಸಲ್ಲಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದು ಈ ಮೊದಲು ಕುಮಾರಸ್ವಾಮಿ ಅವರು ಕೋನರೆಡ್ಡಿ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಕೋನರೆಡ್ಡಿ ನಾಮಪತ್ರ ಸಲ್ಲಿಕೆಯ ಕೊನೇ ದಿನ ಎಲ್ಲ ಸಿದ್ಧತೆಯೊಂದಿಗೆ ಬೆಂಗಳೂರಿಗೆ ಬಂದಿದ್ದರು. ಆದರೆ, ಕೊನೇ ಕ್ಷಣದಲ್ಲಿ ದೇವೇಗೌಡರು ರಮೇಶ್​ ಗೌಡ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಅಚ್ಚರಿ ನೀಡಿದ್ದರು.

ಕಾರ್ಯಕರ್ತರಿಗೂ ಬೇಸರ!

ದೇವೇಗೌಡರ ನಿರ್ಧಾರ ಕೇವಲ ಕುಮಾರಸ್ವಾಮಿ ಅವರು ಮಾತ್ರವಲ್ಲದೇ, ಪಕ್ಷದ ಎಲ್ಲ ಕಾರ್ಯಕರ್ತರಿಗೂ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕಾಗಿ ರಮೇಶ್​ ಗೌಡ ನಾಮಪತ್ರ ಸಲ್ಲಿಸುವ ದಿನ ಯಾವೊಬ್ಬ ನಾಯಕರು ಅವರೊಂದಿಗೆ ಹೋಗಿರಲಿಲ್ಲ. ಅಲ್ಲದೇ. ಪಕ್ಷದ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ್ ಅವರು ಮೇಲ್ಮನೆಗೆ ಅನುಭವಿ ನಾಯಕರನ್ನು ಕಳಿಯಿಸುವಂತೆ ಮಾಡಿದ್ದ ಮನವಿಯನ್ನು ದೇವೇಗೌಡರು ಲೆಕ್ಕಕ್ಕೆ ತೆಗೆದುಕೊಳ್ಳದೆ ಇದ್ದದ್ದು ಅವರ ಅಸಮಾಧಾನಕ್ಕೂ ಕಾರಣವಾಗಿತ್ತು.

Comments are closed.