ರಾಷ್ಟ್ರೀಯ

ಕಾಶ್ಮೀರದಲ್ಲಿ ಪಾಕ್ ಹೆಲಿಕಾಪ್ಟರ್‌ನಿಂದ ಗಡಿ ಉಲ್ಲಂಘನೆ

Pinterest LinkedIn Tumblr


ಹೊಸದಿಲ್ಲಿ: ಪಾಕ್ ಮೂಲದ ಹೆಲಿಕಾಪ್ಟರ್ ಒಂದು ದೇಶದ ವಾಯುಪರಿಧಿಗೆ ಅಕ್ರಮ ಪ್ರವೇಶಗೈದಿದೆ. ಜಮ್ಮು ಮೂಲದ ಸೇನಾ ಸಾರ್ವಜನಿಕ ಸಂಪರ್ಕಾಧಿಕಾರಿ ಲೆ. ಕೊ. ದೇವೆಂದರ್ ಆನಂದ್ ಈ ಬಗ್ಗೆ ಮಾಹಿತಿ ನೀಡಿದ್ದು, ಪಾಕ್‌ನ ಹೆಲಿಕಾಪ್ಟರ್ ಮಧ್ಯಾಹ್ನ 12.10ಕ್ಕೆ ಭಾರತದ ಗಡಿಯೊಳಕ್ಕೆ ಪ್ರವೇಶಿಸಿ ಹಾರಾಟ ನಡೆಸಿ ನಂತರ ಮತ್ತೆ ಮರಳಿದೆ ಎಂದಿದ್ದಾರೆ.

ಬಿಳಿ ಬಣ್ಣದ ಪಾಕ್‌ ಹೆಲಿಕಾಪ್ಟರ್ ಗುಲ್ಪುರ್ ಸೆಕ್ಟರ್ ಮೂಲಕ ಹಾರಾಟ ನಡೆಸಿದೆ. ಶನಿವಾರ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನ ಭಯೋತ್ಪಾದನೆಯನ್ನು ಪೋಷಿಸುತ್ತಿದೆ ಎಂದಿದ್ದರು. ಅದರ ಬೆನ್ನಲ್ಲೇ ಪಾಕ್ ಹೆಲಿಕಾಪ್ಟರ್ ಅಕ್ರಮ ಪ್ರವೇಶಗೈದಿದೆ.

ಕಳೆದ ಫೆಬ್ರವರಿಯಲ್ಲಿ ಕೂಡ ಪಾಕಿಸ್ತಾನದ ಮಿಲಿಟರಿ ಹೆಲಿಕಾಪ್ಟರ್ ಒಂದು ಜಮ್ಮು-ಕಾಶ್ಮೀರದ ಗಡಿನಿಯಂತ್ರಣ ರೇಖೆಯ ಪೂಂಛ್ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಹಾರಾಟ ನಡೆಸಿತ್ತು.

Comments are closed.