ರಾಷ್ಟ್ರೀಯ

ಪತಿ ಮೃತಪಟ್ಟ ದಿನವೇ ಮನೆಗೆಲಸದಾಕೆಯ ಅತ್ಯಾಚಾರಗೈದ ಸೇನಾಧಿಕಾರಿ!

Pinterest LinkedIn Tumblr


ನವದೆಹಲಿ: ಸೇನಾಧಿಕಾರಿಯೊಬ್ಬರು ತಮ್ಮ ಮನೆಗೆಲಸದವಳ ಮೇಲೆ ಅತ್ಯಾಚಾರ ಎಸಗಿದ ಎದುರಿಸುತ್ತಿದ್ದಾರೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇಲೆ ದೆಹಲಿಯ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಸೇನಾಧಿಕಾರಿಯ ಮೇಲೆ ಪ್ರಕರಣ ದಾಖಲಾಗಿರುವ ವಿಚಾರ ಬೆಳಕಿಗೆ ಬಂದಿದೆ. ಜುಲೈ 12ರಂದು ಸೇನಾಧಿಕಾರಿಯ ಮನೆಯಲ್ಲಿ ಈ ಕೃತ್ಯ ನಡೆದಿದೆ. ಸೆ. 25ರಂದು ಕೇಸ್ ರಿಜಿಸ್ಟರ್ ಆಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.

ಮಹಿಳೆ ಮೇಲೆ ಅತ್ಯಾಚಾರ ನಡೆದ ಜುಲೈ 12ರಂದೇ ಆಕೆಯ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಮನೆಗೆಲಸದವರ ವಸತಿಸಮುಚ್ಛಯದ ಮನೆಯಲ್ಲಿ ಆಕೆಯ ಗಂಡ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಅತ್ಯಾಚಾರದ ಘಟನೆಯಾದ ನಂತರವೂ ಆ ಮಹಿಳೆಯು ಅದೇ ಮನೆಯಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಿದ್ದಳೆನ್ನಲಾಗಿದೆ. ಆದರೆ, ಸಂತ್ರಸ್ತೆಯ ಗಂಡ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡನೆಂಬುದು ಗೊತ್ತಾಗಿಲ್ಲ. ಪತ್ನಿಗೆ ಅತ್ಯಾಚಾರವಾದ ಘಟನೆಗೂ ಆತನ ಆತ್ಮಹತ್ಯೆಗೂ ಸಂಬಂಧ ಇದೆಯಾ ಎಂಬುದು ತನಿಖೆಯಿಂದ ಗೊತ್ತಾಗಬೇಕಷ್ಟೇ.

ಇದೀಗ, ಪ್ರಕರಣ ದಾಖಲಿಸಿಕೊಂಡಿರುವ ಕಂಟೋನ್ಮೆಂಟ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.