ಮಂಗಳೂರು ಅಕ್ಟೋಬರ್ 01: ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮತ್ತು ರೋಟರಿ ಕ್ಲಬ್ ಮಂಗಳೂರು ಪೂರ್ವ, ಹಾಗೂ ರೋಟರಿ ಸಮುದಾಯ ದಳ ಕೊಲ್ಯ, ಸೋಮೇಶ್ವರ, ಮುನ್ನೂರು ಯುವಕ ಮಂಡಲ ರಿ), ದುರ್ಗಾವಾಹಿನಿ ಮಹಿಳಾ ಮಂಡಲ (ರಿ), ಕುತ್ತಾರು ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟಂಬರ್ 30 ರಂದು, ಮುನ್ನೂರು ಯುವಕ ಮಂಡಲ,(ರಿ). ಶ್ರೀ. ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಬಳಿ, ಕುತ್ತಾರು, ಮಂಗಳೂರಿನಲ್ಲಿ ‘ಬೃಹತ್ ರಕ್ತದಾನ ಶಿಬಿರ ಮತ್ತು ಇದಾಗಲೇ ಗುರುತಿಸಿಕೊಂಡ 17 ವಿಕಲಚೇತನರಿಗೆ ಗಾಲಿ ಕುರ್ಚಿ, ನೀರು ಹಾಸಿಗೆ, ಊರುಗೋಲಗಳನ್ನು ಅರ್ಹ ಆಯ್ದ ವಿಕಲಚೇತನರಿಗೆ ಪುನಶ್ಚೇತನಗೊಳಿಸುವ ಉಚಿತ ಸಲಕರಣಾ ವಿತರಣಾ ಕಾರ್ಯಕ್ರಮ’ವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್, ತಮ್ಮ ಉದ್ಘಾಟನಾ ಭಾಷಣದಲ್ಲಿ ರಕ್ತದಾನದ ಮಹತ್ವದ ಕುರಿತು ತಿಳಿಸಿದರು.
ಅಧ್ಯಕ್ಷತೆಯನ್ನು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಚೇರ್‍ಮೆನ್ ಸಿಎ. ಶಾಂತರಾಮ ಶೆಟ್ಟಿ ಇವರು ವಹಿಸಿಕೊಂಡಿದ್ದು, ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕೆ.ಎ.ಎಸ್ (ನಿ), ಗೌರವ ಕಾರ್ಯದರ್ಶಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ದ.ಕ ಜಿಲ್ಲಾ ಶಾಖೆ, ಎಸ್.ಎ. ಪ್ರಭಾಕರ ಶರ್ಮ, ಜಯರಾಮ ಶೆಟ್ಟಿ, ಮಾಜಿ ಶಾಸಕರು, ಹಾಗೂ ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಪದಾಧಿಕಾರಿಗಳಾದ ಪ್ರಭಾಕರ ಶ್ರೀಯಾನ್, ನಿತ್ಯಾನಂದ ಶೆಟ್ಟಿ, ದಿನೇಶ್ ರಾವ್ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ರಕ್ತನಿಧಿಯ ಟೆಕ್ನಿಕಲ್ ಸೂಪರ್‍ವೈಸರ್ ಎಡ್ವರ್ಡ್ ವಾಸ್, ಹಾಗೂ ರೆಡ್‍ಕ್ರಾಸ್ ರಕ್ತನಿಧಿ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Comments are closed.