ಕರ್ನಾಟಕ

ಸರ್ಕಾರಿ ನೌಕರರ ಸಂಬಳ ಹೆಚ್ಚಳ: ಅ.4ರ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಲು ಸರ್ಕಾರ ಚಿಂತನೆ

Pinterest LinkedIn Tumblr


ಬೆಂಗಳೂರು: ಕೊನೆಗೂ 6ನೇ ವೇತನ ಆಯೋಗದ ವರದಿ ಮಂಡನೆಗೆ ಸರ್ಕಾರ‌‌ ನಿರ್ಧರಿಸಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಖುಷಿ ತಂದುಕೊಟ್ಟಿದೆ. ಅಕ್ಟೋಬರ್ 4ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಹಲವು ತಿಂಗಳುಗಳಿಂದ ಕಾಯುತ್ತಿದ್ದ ಸರ್ಕಾರಿ ನೌಕರರಿಗೆ ಸಂತಸ ತಂದು ಕೊಡಲಿದೆ.

ಅಕ್ಟೋಬರ್ 4ರಂದು ವಿಧಾನಸೌಧದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಡಾ. ಎಂ. ಆರ್. ಶ್ರೀನಿವಾಸ್ ಮೂರ್ತಿ ಅಧ್ಯಕ್ಷತೆಯಲ್ಲಿ ಆರನೇ ವೇತನ ಆಯೋಗದ ವರದಿ ಮಂಡನೆಯಾಗಲಿದ್ದು, ಈಗಾಗಲೇ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವಿಧಾನಸಭೆ ಚುನಾವಣೆಗೆ ಮೊದಲೇ ಈ ವರದಿ ಸಲ್ಲಿಕೆಯಾಗಿತ್ತಾದರೂ ಚುನಾವಣಾ ನೀತಿ ಸಂಹಿತೆಯಿಂದ ಹಾಗೆಯೇ ಉಳಿದುಕೊಂಡಿತ್ತು. ಇದೀಗ ವರದಿ ಮಂಡನೆಗೆ ರಾಜ್ಯ ಸರ್ಕಾರ ಆಸಕ್ತಿ ತೋರಿಸಿದೆ.

ಆಯೋಗ ಮಾಡಿರುವ ಸಲಹೆಗಳ ಮೇಲೆ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದ್ದು, ಸದ್ಯ ಆಯೋಗದ ವರದಿ ಕುರಿತು ಸರ್ಕಾರದ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಮೂಡಿಸಿದೆ.

6ನೇ ವೇತನ ಆಯೋಗ ಸಂಬಂಧಿಸಿದಂತೆ ನೌಕರರು ಇಟ್ಟಿರುವ ಪ್ರಮುಖ ಬೇಡಿಕೆಗಳೇನು?

1. ಖಾಲಿ ಇರುವ 2 ಲಕ್ಷದ 22 ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕು.

2. ಸರ್ಕಾರದ ಚಾಲ್ತಿ ಜೊತೆಗೆ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸಿಬ್ಬಂದಿಗಳನ್ನು ನೇಮಕ ಮಾಡಬೇಕು.

3. ಕೇಂದ್ರ ಸರ್ಕಾರದ ನೌಕರರಂತೆ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಕೊಡಬೇಕು.

4. ಕೇಂದ್ರ ಸರ್ಕಾರದ ಮಹಿಳಾ ನೌಕರರಂತೆ ರಾಜ್ಯ ಮಹಿಳಾ ನೌಕರರಿಗೆ ಶಿಶುಪಾಲನೆ ರಜೆ ಕೊಡಬೇಕು.

5. ರಾಜ್ಯ ಸರ್ಕಾರದ ಗುತ್ತಿಗೆ-ಹೊರಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕು.

6. ಈ ಹಿಂದಿನ (ಬ್ರಿಟಿಷರು ಮಾಡಿದ್ದ ನೀತಿ) ಹಳೆ ಪಿಂಚಣಿ ನೀತಿ ಜಾರಿಯಾಗಬೇಕು. ಈಗಿರುವ ನೂತನ ಪಿಂಚಣಿ ನೀತಿಯನ್ನು ಕೈ ಬಿಡಬೇಕು.

7. ಕೇಂದ್ರ ಸರ್ಕಾರದ ನೌಕರರಿಗೆ 5 ದಿನಗಳಂತೆ, ರಾಜ್ಯ ಸರ್ಕಾರಿ ನೌಕರರಿಗೂ 5 ದಿನ ಕೆಲಸದ ದಿನಗಳನ್ನಾಗಿ ಮಾಡಬೇಕು.

ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವನೆಯಲ್ಲಿ ಕೆಲ ಪ್ರಮುಖ ಅಂಶಗಳು

1. ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ ಮಾಡಬೇಕು

2. ಈಗಿರುವ ನೌಕರರ ರಜೆಯಲ್ಲಿ ಕಡಿತದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು.

3. ಕಚೇರಿಯಲ್ಲಿನ ಕೆಲಸದ ಅವಧಿ ಹೆಚ್ಚಳ ಹಾಗೂ ಹುದ್ದೆ ಕಡಿತ. (ಒಂದೂವರೆ ತಾಸು ಹೆಚ್ಚಳಕ್ಕೆ)

4. ಕೆಲವು ಇಲಾಖೆಗಳ ವಿಲೀನಕ್ಕೂ ಆಯೋಗದಿಂದ ಸೂಚನೆ.

6. ನೌಕರರ ಸಾಂಪ್ರದಾಯಿಕ ಶ್ರೇಣಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ.

7. ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು..

ಸದ್ಯ ಈಗ 2.22 ಲಕ್ಷ ಹುದ್ದೆಗಳು ಖಾಲಿ ಇವೆ. ಇದರಿಂದ ಕೆಲಸ ಹೆಚ್ಚಾಗಿರುವುದರಿಂದ ನೌಕರರು ಒತ್ತಡಕ್ಕೆ ಸಿಲುಕಿದ್ದಾರೆ. ಹೀಗಾಗಿ ಇರುವ ರಜೆಯನ್ನು ಕಡಿತಗೊಳಿಸಿ, ಕೆಲಸದ ಅವಧಿ ವಿಸ್ತರಿಸಿದರೆ ನೌಕರರ ವಿರೋಧಕ್ಕೂ ಮುಂದೆ ಕಾರಣವಾಗಬಹುದು. ಹೀಗಾಗಿ ಆಯೋಗ ಕೊಟ್ಟಿರುವ 6ನೇ ವೇತನ ಆಯೋಗದ ವರದಿ ಬಗೆಗಿನ ಸರ್ಕಾರದ ಮುಂದಿನ ನಡೆ ಸದ್ಯ‌ ಬಹಳ ಕುತೂಹಲಕ್ಕೆ ಕಾರಣವಾಗಿದೆ.

Comments are closed.