ಮನೋರಂಜನೆ

ಜಾಮೀನಿನ ಮೇಲೆ ಹೊರಬಂದು ಕೀರ್ತಿ ಗೌಡಗಾಗಿ ಕಾದು ಕುಳಿತ ದುನಿಯಾ ವಿಜಿ​; ಕೊನೆಗೂ ಆಗಮಿಸಿದ ಪತ್ನಿ

Pinterest LinkedIn Tumblr


ಬೆಂಗಳೂರು: ಕಳೆದ ಶನಿವಾರ ರಾತ್ರಿ ಜಿಮ್​ ಟ್ರೈನರ್​ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ನಟ ದುನಿಯಾ ವಿಜಯ್​ಗೆ ಅಂತೂಇಂತೂ ಇಂದು ಜಾಮೀನು ಸಿಕ್ಕಿದೆ. ತನ್ನ ಎರಡನೇ ಪತ್ನಿಗಾಗಿ ಜೈಲಿನಲ್ಲಿ ಕಾದು ಕುಳಿತಿದ್ದ ವಿಜಯ್​ ಇದೀಗ ಹೊರಬಂದಿದ್ದು, ಭಾವುಕರಾಗಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಇಂದು ಸಂಜೆ ದುನಿಯಾ ವಿಜಯ್​ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಧೀಶರು ಮುಂದೆ ಈ ರೀತಿಯ ವರ್ತನೆಯನ್ನು ಪುನರಾವರ್ತಿಸದಂತೆ ಬುದ್ಧವಾದ ಹೇಳಿದ್ದರು. ಜಾಮೀನಿನ ಪ್ರತಿ ಪರಪ್ಪನ ಅಗ್ರಹಾರ ಪೊಲೀಸರ ಕೈಗೆ ಸಿಕ್ಕು ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದ್ದರೂ ದುನಿಯಾ ವಿಜಯ್​ ಮಾತ್ರ ಇನ್ನೂ ಹೊರಬಂದಿರಲಿಲ್ಲ. ಜಾಮೀನು ಸಿಕ್ಕ ವಿಷಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಮೈಸೂರಿನಿಂದ ತನ್ನ ಗಂಡನನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಹೊರಟಿದ್ದ ಎರಡನೇ ಪತ್ನಿ ಕೀರ್ತಿಗಾಗಿ ಕಾದು ಕುಳಿತಿದ್ದ ವಿಜಯ್​ ಆಕೆಯೇ ನನ್ನನ್ನು ಸ್ವಾಗತಿಸಬೇಕು ಎಂದು ಜೈಲಿನ ಪ್ರವೇಶ ದ್ವಾರದಲ್ಲೇ ಕಾಯುತ್ತಿದ್ದರು.

ಸುಮಾರು ಹೊತ್ತು ಕಾದ ಬಳಿಕ ಕೀರ್ತಿ ಜೈಲಿಗೆ ಆಗಮಿಸಿದ್ದು, ಪತ್ನಿ ಕೀರ್ತಿ ಗೌಡ ಅವರ ಜೊತೆಯಲ್ಲಿ ಹೊರಕ್ಕೆ ಬಂದಿದ್ದಾರೆ. ಜೈಲಿನ ಬಳಿ ಸೇರಿದ್ದ ಅಭಿಮಾನಿಗಳನ್ನು ನೋಡುತ್ತಿದ್ದಂತೆ ಭಾವುಕರಾದ ವಿಜಯ್​ 9 ದಿನಗಳ ಜೈಲುವಾಸ ಮುಗಿಸಿ ತಮ್ಮ ಮನೆಯತ್ತ ಪ್ರಯಾಣ ಬೆಳೆಸಿದ್ದಾರೆ.

Comments are closed.